ಕೋಟ: ರಕ್ತದಾನದ ಮಹತ್ವದ ಅರಿವನ್ನು ಜನರಿಗೆ ಮೂಡಿಸಬೇಕು. ಇದರಿಂದ ಜಿಲ್ಲೆಯಲ್ಲಿರುವ ರಕ್ತದ ಕೊರತೆ ನೀಗಿಸಲು ಸಾಧ್ಯವಿದೆ ಎಂದು ಕುಂದಾಪುರ ರೆಡ್‌ಕ್ರಾಸ್ ಸಂಸ್ಥೆಯ ಪ್ರತಿನಿಧಿ ಜಯಕರ ಶೆಟ್ಟಿ ಹೇಳಿದರು.
ಕೋಟದ ಜನತಾ ಸಂಸ್ಥೆಯ ಆವರಣದಲ್ಲಿ ಜನತಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಸಿ. ಕುಂದರ್ ಅವರ 77ನೇ ಜನ್ಮದಿನದ ಪ್ರಯುಕ್ತ ಸಂಸ್ಥೆ ಸಿಬ್ಬಂದಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆನಂದ್ ಸಿ.ಕುಂದರ್ ಮಾತನಾಡಿದರು. ಅಪಘಾತದಲ್ಲಿ ನಿಧನರಾದ ಸಂಸ್ಥೆಯ ಸಿಬ್ಬಂದಿ ಸುರೇಶ್ ಕುಟುಂಬಕ್ಕೆ 2.50 ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಎ.ಕುಂದರ್, ರಕ್ಷಿತ್ ಎ.ಕುಂದರ್, ಗೀತಾನಂದ ಟ್ರಸ್ಟ್ ನಿರ್ದೇಶಕರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಶಿವರಾಮ ಶೆಟ್ಟಿ, ಸತ್ಯನಾರಾಯಣ ಪುರಾಣಿಕ್, ಶ್ರೀನಿವಾಸ ಕುಂದರ್, ಅಶ್ವಥ್ ಶೆಟ್ಟಿ ಉಪಸ್ಥಿತರಿದ್ದರು. ರವಿಕಿರಣ್ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.