ನ್ಯೂಸ್

ಯೋಗಾಭ್ಯಾಸ ನಿಮ್ಮ ದಿನಚರಿಯ ಭಾಗವಾಗಲಿ: ಹಲವು ಭಾಷೆಗಳಲ್ಲಿ ಪ್ರಧಾನಿ ಮೋದಿ ಕರೆ..

ನವದೆಹಲಿ: ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ರಾಜ್ಯದ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಯೋಗ ಪ್ರದರ್ಶನ ಮಾಡಲಿದ್ದಾರೆ. ಮಾತ್ರವಲ್ಲ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಆಗಮಿಸಲಿದ್ದಾರೆ.

ಈ ಮಧ್ಯೆ ಯೋಗದ ಮಹತ್ವದ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲರೂ ಯೋಗಾಭ್ಯಾಸಲ್ಲಿ ತೊಡಗಬೇಕು ಎಂಬ ಮನವಿ ಮಾಡಿಕೊಂಡಿದ್ದಾರೆ. ಈ ಸಂದೇಶ ಎಲ್ಲರನ್ನೂ ತಲುಪಬೇಕು ಎಂಬ ನಿಟ್ಟಿನಲ್ಲಿ ಅವರು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಟ್ವೀಟ್​ ಮಾಡಿದ್ದಾರೆ.

"ಇನ್ನು ಕೆಲವೇ ದಿನಗಳಲ್ಲಿ, ಜಗತ್ತು ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಿದೆ. ಯೋಗ ದಿನವನ್ನು ನೀವೆಲ್ಲರೂ ಆಚರಿಸುವಂತೆ ಮತ್ತು ಯೋಗಾಭ್ಯಾಸವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಿ ಎಂದು ನಾನು ಆಗ್ರಹಿಸುವೆ. ಅದರಿಂದ ಆಗುವ ಲಾಭಗಳು ಹಲವಾರು.." ಎಂದು ಯೋಗ ಇನ್​ ಅವರ್ ಡೈಲಿ ಲೈಪ್ ಎಂಬ ವಿಡಿಯೋ ಮೋದಿ ಹಂಚಿಕೊಂಡಿದ್ದಾರೆ.