recipe: ಇಂದಿನ ದಿನಗಳಲ್ಲಿ ಅನೇಕರು ಸಂಜೆ ವಿಧವಿಧವಾದ ತಿಂಡಿ ತಿನ್ನಲು ಬಯಸುತ್ತಾರೆ. ಆಹಾರ ಪ್ರಿಯರಿಗೆ ಸಂಜೆ ಏನಾದರೂ ತಿನ್ನಲೇ ಬೇಕು ಎಂದಾಗ ಅವರು ಆದಷ್ಟು ರಸ್ತೆ ಬದಿಯಲ್ಲಿರುವ ಅಥವಾ ಚಾಟ್ಸ್ ಅಂಗಡಿಗಳಿಗೆ ಹೋಗಿ ತಮಗಿಷ್ಟವಾದ ಆಹಾರವನ್ನು ಸೇವಿಸುತ್ತಾರೆ. ಅಂತವರು ನಿಮ್ಮ ಮನೆಯಲ್ಲಿಯೇ ಸ್ವಲ್ಪ ಸಮಯದಲ್ಲಿ ಈ ರೀತಿಯ ಪೆರಿ ಪೆರಿ ಬಾಲ್ಸ್ ತಯಾರಿಸಿ ಸೇವಿಸಿ..
* 3 ಆಲುಗಡ್ಡೆ
* 2 ಚಮಚ ಖಾರದಪುಡಿ
* 1 ಚಮಚ ಜೀರಿಗೆ
* ಕಾಳು ಮೆಣಸಿನ ಪುಡಿ
* ಉಪ್ಪು
* ಕಾನ್ಫ್ಲೋರ್
* ಎಣ್ಣೆ
ಇದನ್ನೂ ಓದಿ: ಪ್ರವಾಹದಿಂದ ತತ್ತರಿಸಿದ ಪಾಕಿಸ್ತಾನ: ನೀರನ್ನು ಚರಂಡಿಗೆ ಬಿಡದೇ ಟಬ್ನಲ್ಲಿ ಸಂಗ್ರಹಿಸಿ ಎಂದ ಪಾಕ್ ರಕ್ಷಣಾ ಸಚಿವ| Pak Flood
ಮೊದಲು ಆಲುಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದುಕೊಳ್ಳಿ. ನಂತರ ಒಂದು ಬೌಲ್ಗೆ ಬೇಯಿಸಿದ ಆಲೂಗಡ್ಡೆ ಹಾಕಿ ಸ್ಮಾಶ್ ಮಾಡಿ. ಅದಕ್ಕೆ ಖಾರದಪುಡಿ, ಜೀರಿಗೆ, ಕಾಳು ಮೆಣಸಿನ ಪುಡಿ, ಉಪ್ಪು ಹಾಗೂ ಕಾನ್ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚಿಕ್ಕ ಉಂಡೆಗಳನ್ನಾಗಿ ಎಣ್ಣೆಯಲ್ಲಿ ಕೆಂಪು ಬಣ್ಣ ಬರುವವರೆಗೂ ಕರಿಯಿರಿ. ಸ್ವಲ್ಪ ತಣ್ಣಗಾದ ನಂತರ ಟೊಮೆಟೋ ಸಾಸ್ ಜೊತೆ ಸೇವಿಸಿ... (ಏಜೆನ್ಸೀಸ್)