ನ್ಯೂಸ್

ಕಡಿಮೆ ಸಮಯದಲ್ಲಿ ಮಾಡಿ ರುಚಿಯಾದ ಎಗ್​ ಐಸ್​ಕ್ರೀಂ ಫ್ಲೋಟಿಂಗ್​ | Recipe

ಭಾನುಪ್ರಿಯ ಡಿ.ಕೆ

Recipe: ಇಂದಿನ ದಿನಗಳಲ್ಲಿ ಆಹಾರ ಪ್ರಿಯರು ನಾನಾ ರೀತಿಯ ಆಹಾರವನ್ನು ಸೇವಿಸಲು ಬಯಸುತ್ತಾರೆ. ಅದೇ ರೀತಿಯಲ್ಲಿ ಮೊಟ್ಟೆಯನ್ನು ಇಷ್ಟ ಪಡುವಂತವರು ಅದರಿಂದ ಮಾಡುವಂತಹ ಎಲ್ಲಾ ಪದಾರ್ಥಗಳನ್ನು ಸೇವಿಸಲು ಬಯಸುತ್ತಾರೆ. ಅದೇ ರೀತಿ ನಾವಿಂದು ಮೊಟ್ಟೆಯಿಂದ ಮಾಡುವಂತಹ ಎಗ್​ ಐಸ್​ಕ್ರೀಂ ಫ್ಲೋಟಿಂಗ್​ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಬೇಕಾಗುವ ಪದಾರ್ಥಗಳು

* 2 ಮೊಟ್ಟೆ

* 1/2 ಕಪ್​ ಸಕ್ಕರೆ ಪುಡಿ

* 1/4 ಚಮಚ ವೆನಿಲ್ಲಾ ಎಸೆನ್ಸ್​

* 2 ಕಪ್​ ಹಾಲು

* 1/4 ಕಪ್​ ಕಾನ್​ಫ್ಲೋರ್

* 10 ತುಂಡು ಬೇಯಿಸಿದ ಮೊಟ್ಟೆಯ ಬಿಳಿಭಾಗ

ಮಾಡುವ ವಿಧಾನ

ಒಂದು ಬಟ್ಟಲಿಗೆ ಮೊಟ್ಟೆಯನ್ನು ಒಡೆದು ಹಳದಿ ಭಾಗವನ್ನು ಪ್ರತ್ಯೇಕವಾಗಿಟ್ಟು, ಬರೀ ಬಿಳಿಯ ಬಿಳಿಭಾಗವನ್ನು ಹಾಕಿ ಅದಕ್ಕೆ ಸಕ್ಕರೆ ಪುಡಿ, ವೆನಿಲ್ಲಾ ಎಸೆನ್ಸ್​ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮತ್ತೊಂದು ಬೌಲ್​ಗೆ ಮೊಟ್ಟೆಯ ಹಳದಿ ಭಾಗ ಹಾಕಿ ಅದಕ್ಕೆ ವೆನಿಲ್ಲಾ ಎಸೆನ್ಸ್​, ಸಕ್ಕರೆ, ಕಾನ್​ಫ್ಲೋರ್​, ಹಾಲು ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ. ಒಲೆಯ ಮೇಲೆ ಬೇಯಲು ಬಿಡಿ. ಇದಕ್ಕೆ ರೆಡಿ ಮಾಡಿಟ್ಟುಕೊಮಡಿರುವ ಮೊಟ್ಟೆಯ ಬಿಳಿಭಾಗವನ್ನು ಹಾಕಿ ಮಿಕ್ಸ್​ ಮಾಡಿ ಸ್ವಲ್ಪ ಸಮಯ ಬಿಸಿ ಮಾಡಿ. ಈ ಮಿಶ್ರಣವನ್ನು ಒಮದು ಕಡಾಯಿಗೆ ಹಾಕಿ ಅದರ ಮೆಲೆ ಬಾದಾಮಿ ಹಾಕಿ 4 ಗಂಟೆ ಫ್ರಿಜ್​ನಲ್ಲಿಡಿ. ನಂತರ ಸೇವಿಸಿ...(ಏಜೆನ್ಸೀಸ್​)