ನ್ಯೂಸ್

ಇಂದೇ ತಯಾರಿಸಿ ರುಚಿಕರವಾದ ಜ್ಯೂಸಿ ಸ್ವೀಟ್​!| Recipe

Recipe: ಇನ್ನೇನು ಕೆಲವೇ ದಿನಗಳಲ್ಲಿ ಒಂದರ ಹಿಂದೆ ಒಂದರಂತೆ ಹಬ್ಬಗಳು ಬರುತ್ತಿವೆ. ಹಬ್ಬದ ಸಲುವಾಗಿ ಏನು ಸಿಹಿ ಮಾಡಬೇಕೆಂದು ಯೋಚಿಸ್ತಾ ಇದ್ದೀರಾ, ಹಾಗಿದ್ದರೆ ಇಲ್ಲಿ ನೋಡಿ ರುಚಿಕರವಾದ ಭಾರತೀಯ ಸಿಹಿ ತಿಂಡಿಯಾದ ಜ್ಯೂಸಿ ಸ್ವೀಟ್​ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ.

ಬೇಕಾಗುವ ಪದಾರ್ಥಗಳು

* 2 ಕಪ್​ ಮೈದಾ

* 2 ಚಮಚ ಬೆಣ್ಣೆ

* ಉಪ್ಪು

* ನೀರು

* 2 ಕಪ್​ ಸಕ್ಕರೆ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಸ್ವಲ್ಪ ಬೆಣ್ಣೆ ಮತ್ತು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡಿ ಬಟ್ಟೆ ಮುಚ್ಚಿ ಇಡಿ. ನಂತರ ಒಂದು ಕಡಾಯಿಯಲ್ಲಿ ನೀರು ಮತ್ತು ಸಕ್ಕರೆ ಸೇರಿಸಿ ಪಾಕ ಮಾಡಿಕೊಂಡು ಪಕ್ಕಕ್ಕಿಟ್ಟುಕೊಳ್ಳಿ. ಇದಾದ ಬಳಿಕ ಮೈದಾ ಹಿಟ್ಟನ್ನು ಉಂಡೆಗಳಾಗಿ ಮಾಡಿ ಸಾಧಾರಣ ಅಳತೆಗೆ ಉದ್ದಿಕೊಂಡು ಒಂದರ ಮೇಲೆ ಒಂದರಂತೆ 5 ಎಲೆಗಳನ್ನು ಜೋಡಿಸಿ ಮತ್ತೆ ಉದ್ದಿಕೊಳ್ಳಿ.

ನಂತರ ಅಷ್ಟನ್ನು ರೋಲ್​ ಮಾಡಿಕೊಂಡು ತುಂಡು ತುಂಡುಗಳಾಗಿ ಕತ್ತರಿಸಿ. ಇದಾದ ಬಳಿಕ ಅವುಗಳನ್ನು ಒಂದು ಬಾರಿ ಒತ್ತಿಕೊಳ್ಳಿ. ಒಂದು ಕಡಾಯಿಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಮಾಡಿಟ್ಟುಕೊಂಡಿರುವ ಎಲೆಗಳನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೂ ಕರಿಯಿರಿ. ನಂತರ ಸಕ್ಕರೆ ಪಾಕಕ್ಕೆ ಹಾಕಿ ನೆನಸಿ. ಪಾಕ ಹೀರಿಕೊಂಡ ನಂತರ ಸೇವಿಸಿರಿ..

(ಏಜೆನ್ಸೀಸ್​)