Terrorist : ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳು ಕನಿಷ್ಠ 100 ಒಳನುಸುಳುವಿಕೆ ಪ್ರಯತ್ನಗಳಿಗೆ ಕಾರಣವಾದ 'ಮಾನವ ಜಿಪಿಎಸ್' ಎಂದೂ ಕರೆಯಲ್ಪಡುವ ಬಾಗು ಖಾನ್‌ನನ್ನು ಹೊಡೆದುರುಳಿಸಿದ್ದಾರೆ. ಈತನನ್ನು ನಿರ್ಮೂಲನೆ ಮಾಡುವ ಮೂಲಕ ಪ್ರಮುಖ ಭಯೋತ್ಪಾದಕ ಜಾಲಕ್ಕೆ ದೊಡ್ಡ ಹೊಡೆತ ನೀಡಲಾಗಿದೆ.
ಇಂದು (ಆ.30) ನೌಶೇರಾ ನಾರ್ ಪ್ರದೇಶದಿಂದ ಒಳನುಸುಳುವಿಕೆ ಪ್ರಯತ್ನದ ಸಂದರ್ಭದಲ್ಲಿ ಬಾಗು ಖಾನ್ ಮತ್ತು ಮತ್ತೊಬ್ಬ ಭಯೋತ್ಪಾದಕ ಗುಂಡೇಟಿಗೆ ಬಲಿಯಾಗಿದ್ದಾನೆ. ಬಾಗು ಖಾನ್ ಅಲಿಯಾಸ್ ಸಮಂದರ್ ಚಾಚಾ, 1995 ರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸಕ್ರಿಯನಾಗಿದ್ದನು. ಕಾಶ್ಮೀರ ಕಣಿವೆಯಲ್ಲಿ ಒಳನುಸುಳುವಿಕೆಗೆ ಅತಿದೊಡ್ಡ ಕೊಂಡಿಯಾಗಿ ಈತ ಕೆಲಸ ನಿರ್ವಹಿಸುತ್ತಿದ್ದನು. ಅವನಿಗೆ ರಹಸ್ಯ ಮಾರ್ಗಗಳ ಬಗ್ಗೆ ವಿವರವಾದ ಜ್ಞಾನವಿತ್ತು ಮತ್ತು ಆ ಪ್ರದೇಶದ ಕಷ್ಟಕರವಾದ ಭೌಗೋಳಿಕ ಪರಿಸ್ಥಿತಿಗಳ ಸುತ್ತಲಿನ ಮಾರ್ಗವನ್ನು ಆತ ತಿಳಿದಿದ್ದ. ಕಳೆದ ಮೂರು ದಶಕಗಳಿಂದ ಭಯೋತ್ಪಾದಕ ಒಳನುಸುಳುವಿಕೆಗೆ ಈತ ಕೊಂಡಿಯಂತೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಭಾರತದಲ್ಲೇ ಸ್ವದೇಶಿ ಯುದ್ದ ನೌಕೆಗಳನ್ನು ತಯಾರಿಸುವ ಗುರಿ ಇದೆ; ರಕ್ಷಣಾ ಸಚಿವ ರಾಜನಾಥ್ ಸಿಂಗ್| Rajnath Singh
(ಏಜೆನ್ಸೀಸ್)
ಒಳನುಸುಳುವಿಕೆ ಪ್ರಯತ್ನದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಗುರೆಜ್ ಸೆಕ್ಟರ್‌ನಲ್ಲಿ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ತಿಳಿಸಿದೆ. ಪರಿಣಾಮವಾಗಿ ಭಯೋತ್ಪಾದಕರಿಗೆ ಗುಂಡುಹಾರಿಸಲಾಯ್ತು ಎನ್ನಲಾಗಿದೆ.