ನವದೆಹಲಿ: ಭಾರತದ ಔಷಧ ನಿಯಂತ್ರಕ ಸಂಸ್ಥೆ ಇತ್ತೀಚೆಗೆ ನಡೆಸಿದ ಗುಣಮಟ್ಟ ಪರೀಕ್ಷೆಯಲ್ಲಿ ದೇಶದಲ್ಲಿ ವ್ಯಾಪಕವಾಗಿ ಬಳಸಲಾಗುವ ಹಲವಾರು ಪ್ರಮುಖ ಔಷಧ(Major Drug)ಗಳು ವಿಫಲವಾಗಿವೆ. ಆಂಟಾಸಿಡ್ ಪ್ಯಾನ್ ಡಿ, ಕ್ಯಾಲ್ಸಿಯಂ ಸಪ್ಲಿಮೆಂಟ್ ಶೆಲ್ಕಾಲ್, ಆಂಟಿ ಡಯಾಬಿಟಿಕ್ ಡ್ರಗ್ ಗ್ಲಿಮೆಪಿರೈಡ್, ಟೆಲ್ಮಿಸಾರ್ಟನ್ ಸೇರಿದಂತೆ ಹಲವು ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದ್ದು ಇವುಗಳನ್ನು ಬಳಸುವುದು ಬಹಳ ಅಪಾಯಕಾರಿ ಎಂದು ಬಹಿರಂಗಪಡಿಸಿದೆ.
ಇದನ್ನು ಓದಿ: Health Tips | ಕಪ್ಪು ಅರಿಶಿನದಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನವಿದೆ ಗೊತ್ತಾ; ಇಲ್ಲಿದೆ ಉಪಯುಕ್ತ ಮಾಹಿತಿ
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಆಗಸ್ಟ್‌ನಲ್ಲಿ ‘ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ (NSQ)’ ಎಚ್ಚರಿಕೆಯನ್ನು ನೀಡಿತು. ಅದರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೊಟ್ಟೆಯ ಸೋಂಕುಗೆ ನೀಡುವ ಔಷಧಿಗಳು ಸೇರಿದಂಥೆ 50ಕ್ಕೂ ಹೆಚ್ಚಿನ ಔಷಧಿಗಳನ್ನು ಹೈಲೈಟ್ ಮಾಡಿತ್ತು.
Pan D : ಜಠರಗರುಳಿನ ಸಮಸ್ಯೆಗಳಿಗೆ ಬಳಸುವ ಆಂಟಾಸಿಡ್
Shelcal : ಕ್ಯಾಲ್ಸಿಯಂಗಾಗಿ ಬಳಸುವ ಔಷಧ
Glimepiride : ಮಧುಮೇಹ ವಿರೋಧಿ ಔಷಧ.
Telmisartan : ಅಧಿಕ ರಕ್ತದೊತ್ತಡಕ್ಕೆ ಬಳಸುವ ಔಷಧ.
ಹೆಟೆರೊ ಡ್ರಗ್ಸ್, ಅಲ್ಕೆಮ್ ಲ್ಯಾಬೊರೇಟರೀಸ್, ಹಿಂದೂಸ್ತಾನ್ ಆ್ಯಂಟಿಬಯೋಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಮತ್ತು ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಸೇರಿದಂತೆ ಹಲವಾರು ಉನ್ನತ ಫಾರ್ಮಾ ಸಂಸ್ಥೆಗಳು ತಯಾರಿಸಿದ ಔಷಧಗಳು ಈ ಪಟ್ಟಿಯಲ್ಲಿ ಇವೆ.
ಅಧಿಕ ರಕ್ತದೊತ್ತಡಕ್ಕೆ ಬಳಸುವ ಟೆಲ್ಮಿಸಾರ್ಟನ್‌ನ ಔಷಧಗಳನ್ನು ಹರಿದ್ವಾರ ಮೂಲದ ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬೋರೇಟರೀಸ್ನಲ್ಲಿ ತಯಾರಿಸಲಾಗುತ್ತದೆ. ಹೊಟ್ಟೆಯ ಸೋಂಕಿನ ಚಿಕಿತ್ಸೆಗೆ ನೀಡುವ ಮೆಟ್ರೋನಿಡಜೋಲ್ ಅನ್ನು PSU ಹಿಂದೂಸ್ತಾನ್ ಆಂಟಿಬಯೋಟಿಕ್ ಲಿಮಿಟೆಡ್ (HAL) ತಯಾರಿಸಿದೆ, ಟೊರೆಂಟ್ ಫಾರ್ಮಾಸ್ಯುಟಿಕಲ್ಸ್‌ನಿಂದ ಮಾರಾಟವಾದ ಮತ್ತು ಉತ್ತರಾಖಂಡ ಮೂಲದ ಪ್ಯೂರ್ & ಕ್ಯೂರ್ ಹೆಲ್ತ್‌ಕೇರ್ ತಯಾರಿಸಿದ ಶೆಲ್ಕಾಲ್ ಕೂಡ ಪರೀಕ್ಷೆಯಲ್ಲಿ ವಿಫಲವಾಗಿದೆ.
" class="alignnone wp-image-2370512 size-full" height="396" src="https://www.vijayavani.net/wp-content/uploads/2024/09/tablets.webp" width="704"/>
ಫಾರ್ಮಾ ಸಂಸ್ಥೆ ಅಲ್ಕೆಮ್ ಹೆಲ್ತ್ ಸೈನ್ಸ್‌ನ ಆ್ಯಂಟಿಬಯೋಟಿಕ್ ಡ್ರಗ್ Clavam 625 ಮತ್ತು Pan D ಕೋಲ್ಕತಾದ ಡ್ರಗ್-ಟೆಸ್ಟಿಂಗ್ ಪ್ರಯೋಗಾಲಯದಲ್ಲಿ ನಕಲಿ ಎಂದು ಕಂಡುಬಂದಿದೆ. ಅದೇ ಲ್ಯಾಬ್ ಹೈದರಾಬಾದ್ ಮೂಲದ ಹೆಟೆರೊನ Cepodem XP 50 ನಕಲಿ ಗುಣಮಟ್ಟದ ಡ್ರೈ ಸಸ್ಪೆನ್ಶನ್ ಅನ್ನು ಕಂಡುಹಿಡಿದಿದೆ. ಗಂಟಲು, ಶ್ವಾಸಕೋಶ, ಮೂತ್ರನಾಳ ಅಥವಾ ಬ್ಯಾಕ್ಟೀರಿಯಾ ಸೋಂಕಿಗಾಗಿ ಮಕ್ಕಳಿಗೆ ನೀಡುವ ಔಷಧವಾದ, ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಪ್ಯಾರಾಸಿಟಮಾಲ್ ಮಾತ್ರೆಗಳು ಸಹ ಈ ಪಟ್ಟಿಯಲ್ಲಿ
ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಔಷಧಗಳನ್ನು ಉತ್ಪಾದಿಸುವ ಕಂಪನಿಗಳು ಈ ಉತ್ಪನ್ನಗಳು ತಮ್ಮ ಕಂಪನಿಯಿಂದ ತಯಾರಿಸಲ್ಪಟ್ಟಿಲ್ಲ ಹಾಗೂ ಅವುಗಳು ನಕಲಿ ಎಂದು ತಿಳಿಸಿವೆ. ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)