ನ್ಯೂಸ್

ಮಹಾರಾಷ್ಟ್ರದ ನಕ್ಸಲಿಸಂಗೆ ಭಾರಿ ಹೊಡೆತ: 60 ಕಾರ್ಯಕರ್ತರೊಂದಿಗೆ ಪೊಲೀಸರಿಗೆ ಶರಣಾದ ನಕ್ಸಲ್ ನಾಯಕ| Naxal Leader

Mumbai: ಮಹಾರಾಷ್ಟ್ರ, ಛತ್ತೀಸ್​ಗಢದ ಗಡಿ ಭಾಗ ಗಡ್ಚಿರೋಲಿ ಭಾಗದಲ್ಲಿದ್ದ ನಕ್ಸಲಿಸಂಗೆ ಭಾರಿ ಹೊಡೆತ ಬಿದ್ದಿದ್ದು, ನಕ್ಸಲ್ ಕೇಂದ್ರ ಸಮಿತಿಯ ಶಕ್ತಿ ಕೇಂದ್ರ ಮತ್ತು ಪಾಲಿಟ್ ಬ್ಯೂರೋದ ಫೈರ್ ಬ್ರಾಂಡ್ ನಾಯಕನಾಗಿದ್ದ  ಮೋಸ್ಟ್ ಗೆರಿಲ್ಲಾ ತಂತ್ರಗಾರ ಹಿರಿಯ Naxal Leader ಮಲ್ಲೊಜುಲ ವೇಣುಗೋಪಾಲ್ @ ಸೋನು ಭೂಪತಿ(69) ಮಂಗಳವಾರ(ಅ. 14) ತನ್ನ 60 ಕಾರ್ಯಕರ್ತರೊಂದಿಗೆ ಪೊಲೀಸರಿಗೆ ಶರಣಾಗಿದ್ದಾರೆ.

ಮಹಾರಾಷ್ಟ್ರದ ಗಡ್ಚಿರೋಲಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ 62 ಕಾರ್ಯಕರ್ತರೊಂದಿಗೆ ವೇಣುಗೋಪಾಲ್ ಶರಣಾಗಿದ್ದಾರೆ. ಇದು ರಾಜ್ಯದ ಐದು ದಶಕಗಳ ನಕ್ಸಲಿಸಂನ ಅಂತ್ಯವನ್ನು ಸೂಚಿಸುತ್ತದೆ. 30 ವರ್ಷಗಳಿಗೂ ಹೆಚ್ಚು ಕಾಲ ಭದ್ರತಾ ಪಡೆಗಳ ವಿರುದ್ಧ ನಿರಂತರ ಕಾರ್ಯಾಚರಣೆಯನ್ನು ಮುನ್ನಡೆಸಿ ಹತ್ಯೆಗೀಡಾದ ಮಾವೋವಾದಿ ಕಿಶನ್‌ಜಿಯ ಸಹೋದರ ಈ ವೇಣುಗೋಪಾಲ್. ಇಂದು ಬೆಳಗಿನ ಪೊಲೀಸರಿಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾದರು.

ಶರಣಾದ ವೇಣುಗೋಪಾಲ್ ನಕ್ಸಲ್ ಸಂಘಟನೆಯ ಅತ್ಯಂತ ಪ್ರಭಾವಶಾಲಿ ತಂತ್ರಜ್ಞರಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದನು. ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಪ್ಲಟೂನ್ ಕಾರ್ಯಾಚರಣೆಗಳನ್ನು ದೀರ್ಘಕಾಲ ಮೇಲ್ವಿಚಾರಣೆ ಮಾಡಿದ್ದನು. ವಿವಿಧ ರಾಜ್ಯಗಳಿಂದ ಅವನ ತಲೆಗೆ ಒಟ್ಟು 10 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ವರದಿಗಳು ಉಲ್ಲೇಖಿಸಿವೆ.

ಈ ಕುರಿತು ಮಾಹಿತಿ ನೀಡಿರುವ ಗುಪ್ತಚರ ಅಧಿಕಾರಿಯೊಬ್ಬರು, ವೇಣುಗೋಪಾಲ್ @ ಭೂಪತಿ ಪಕ್ಷದ ಸೈದ್ಧಾಂತಿಕ ಮುಖ್ಯಸ್ಥರಷ್ಟೇ ಅಲ್ಲ, ಅದರ ಸಂವಹನ ತಜ್ಞರೂ ಆಗಿದ್ದರು. ಛತ್ತೀಸ್‌ಗಢದ ಕಾಡುಗಳ ಹೊರಗಿನ ಪ್ರಪಂಚಕ್ಕೆ ಅದನ್ನು ಸಂಪರ್ಕಿಸುವ ದಾರವೂ ಆಗಿದ್ದರು. ಅವರ ಶರಣಾಗತಿಯಿಂದ ನಕ್ಸಲ್ ಸಂಘಟನೆಗೆ ಹಿನ್ನಡೆಯನ್ನು ಅನುಭವಿಸಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)