ನ್ಯೂಸ್

ಸ್ವಇಚ್ಛೆಯಿಂದ ಶಾರೂಖ್​ ಹೆಸರನ್ನು ತೆಗೆದುಕೊಂಡಿಲ್ಲ; ಪಾಕ್​ ನಟಿ ಮಹೀರಾ ಹೀಗೆಳಿದ್ದೇಕೆ? | Mahira Khan

ಇಸ್ಲಾಮಾಬಾದ್​​: ಪಾಕಿಸ್ತಾನಿ ನಟಿ ಮಹಿರಾ ಖಾನ್(Mahira Khan) 2017ರಲ್ಲಿ ಬಾಲಿವುಡ್​ ಕಿಂಗ್​​ಖಾನ್​​​​ ಶಾರೂಖ್​​ ಜತೆ ಸಿನಿಮಾ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಬಿಟೌನ್​​ ಕಿಂಗ್​​​​​​​​​​​ ಹೆಸರು ತೆಗೆದುಕೊಂಡಗೆಲ್ಲಾ ಪ್ರತಿ ಬಾರಿಯೂ ಆಕೆಯನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಿದ್ದಾರೆ. ಸದ್ಯ ಈ ಬಗ್ಗೆ ಮೌನ ಮುರಿದಿರುವ ಮಹೀರಾ ಖಾನ್​​​ ಸ್ಪಷ್ಟನೆ ನೀಡಿದ್ದಾರೆ.

ಕರಾಚಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮಹೀರಾ ಖಾನ್​​​ ತನ್ನನ್ನು ಟ್ರೋಲ್​​ ಮಾಡುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ನಾನು ಎಂದಿಗೂ ಬೇಕೆಂದು ಶಾರೂಖ್​​ ಹೆಸರು ತೆಗೆಕೊಳ್ಳುವುದಿಲ್ಲ. ಪ್ರತಿ ಸಂದರ್ಶನದಲ್ಲೂ ಶಾರೂಖ್​ ಜತೆ ಸಿನಿಮಾಲ್ಲಿ ನಟಿಸಿರುವ ಅನುಭವದ ಬಗ್ಗೆ ಕೇಳಲಾಗುತ್ತದೆ. ಆದ್ದರಿಂದ ಯಾರಾದರೂ ನನ್ನನ್ನು ಈ ಪ್ರಶ್ನೆ ಕೇಳಿದಾಗ ಅವರಿಗೆ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ಎಂದಿಗೂ ನನ್ನ ಸ್ವಇಚ್ಛೆಯಿಂದ ಶಾರೂಖ್​ ಕುರಿತು ಮಾತನಾಡುವುದಿಲ್ಲ. ನೀವು ಮತ್ತೆ ಅವರ ಬಗ್ಗೆ ನನ್ನನ್ನು ಕೇಳುವುದಿಲ್ಲ ಎಂದು ನನಗೆ ತೋರುತ್ತದೆ ಎಂದು ತಿಳಿಸಿದರು.

ಮಹೀರಾ ಪಾಕಿಸ್ತಾನದ ಪ್ರಸಿದ್ಧ ನಟಿ. ಹಮ್​​ಸಫರ್​​ ಧಾರಾವಾಹಿಯ ಮೂಲಕ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಬಳಿಕ 2017ರಲ್ಲಿ ರಯೀಸ್​​​​​ ಸಿನಿಮಾದ ಮೂಲಕ ಬಾಲಿವುಡ್​​ ಪ್ರವೇಶಿಸಿದರು. ಮಹಿರಾ ಒಮ್ಮೆ ಶಾರೂಖ್​​ ಅವರನ್ನು ತನ್ನ ಬಾಲ್ಯದ ಪ್ರೀತಿ ಎಂದು ಕರೆದಿದ್ದರು. ಮಹೀರಾ ಖಾನ್​​ 2025ರಲ್ಲಿ ನೀಲೋಫರ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.(ಏಜೆನ್ಸೀಸ್​​)