ನ್ಯೂಸ್

ಮುಫಾಸಾ:ದಿ ಲಯನ್​ ಕಿಂಗ್​ನಲ್ಲಿ ಟಾಲಿವುಡ್​​ ಪ್ರಿನ್ಸ್​​​​; ಬಹಳ ವಿಶೇಷ ಎಂದ ಮಹೇಶ್​ ಬಾಬು

ಹೈದರಾಬಾದ್​​: ಟಾಲಿವುಡ್​ ಪ್ರಿನ್ಸ್​​ ಮಹೇಶ್​ಬಾಬು ತಮ್ಮ ನಟನೆಯ ಮೂಲಕ ತಮ್ಮದೇ ಆದ ಅಭಿಮಾನ ಬಳಗವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸೂಪರ್​ಸ್ಟಾರ್​ ಸಿನಿಮಾ ಸುದ್ದಿಗಳು ಮಾತ್ರ ಹರಿದಾಡುತ್ತಿರುವೆ. ಮಹೇಶಬಾಬು ಅವರಿಗೆ ಸಂಬಂಧಿಸಿದ ಯಾವುದೇ ಗಾಸಿಪ್​ ಸುದ್ದಿಗಳು ವೈರಲ್​ ಆಗಿಲ್ಲ. ಪ್ರಸ್ತುತ ಮುಫಾಸಾ: ದಿ ಲಯನ್ ಕಿಂಗ್ ಚಿತ್ರದಲ್ಲಿ ಮಹೇಶ್​ ಬಾಬು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್​ ಅಂಗಳದಿಂದ ಕೇಳಿಬಂದಿದೆ.

ಹೌದು, ಮುಫಾಸಾ:ದಿ ಲಯನ್​ ಕಿಂಗ್​​ ಸಿನಿಮಾದಲ್ಲಿ ಮಹೇಶ್​ಬಾಬು ಅವರ ಧ್ವನಿ ಅಭಿಮಾನಿಗಳನ್ನು ರಂಜಿಸಲಿದೆ. ಹಾಲಿವುಡ್ ಪ್ರೇಕ್ಷಕರು ಹಾಗೂ ಇಡೀ ವಿಶ್ವವೇ ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದೆ. ಇಂಗ್ಲಿಷ್ ಜತೆಗೆ ಡಬ್ಬಿಂಗ್ ಆವೃತ್ತಿಯು ಭಾರತದಲ್ಲಿ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು ಆವೃತ್ತಿಯಲ್ಲಿ ಮುಫಾಸಾ ಪಾತ್ರಕ್ಕೆ ಮಹೇಶ್ ಧ್ವನಿ ನೀಡಲಿದ್ದಾರೆ.

ನಾನು ಡಿಸ್ನಿಯಲ್ಲಿ ಬ್ಲಾಕ್​ಬಸ್ಟರ್​ ಮನರಂಜನೆ ಹಾಗೂ ಕಥೆ ಹೇಳುವ ರೀತಿಯನ್ನು ಯಾವಾಗಲು ಮೆಚ್ಚುತ್ತೇನೆ. ಪ್ರೀತಿಯ ತಂದೆಯಾಗಿ ಮಗನಿಗೆ ಮಾರ್ಗದರ್ಶನ ನೀಡುವುದರ ಜತೆಗೆ ಕಾಡಿನ ರಾಜನಾಗಿ ತನ್ನ ಕುಲವನ್ನು ನೋಡಿಕೊಳ್ಳುವುದ ಮುಫಾಸಾ ಪಾತ್ರವು ನನ್ನನ್ನು ಆಕರ್ಷಿಸಿರುತ್ತದೆ. ಡಿಸ್ನಿಯೊಂದಿಗಿನ ಈ ಸಹಯೋಗವು ವೈಯಕ್ತಿಕವಾಗಿಯೂ ನನಗೆ ಬಹಳ ವಿಶೇಷವಾಗಿದೆ, ಏಕೆಂದರೆ ಇದು ಮಕ್ಕಳೊಂದಿಗೆ ಕುಳಿತು ನೋಡುಬಹುದು. ಅದನ್ನು ಅವರು ಮತ್ತು ನಾನು ಎಂಜಾಯ್​ ಮಾಡುತ್ತೇವೆ. ನನ್ನ ಕುಟುಂಬ ಮತ್ತು ನನ್ನ ಅಭಿಮಾನಿಗಳು ಯಾವಾಗ ಮುಫಾಸಾ: ದಿ ಲಯನ್ ಕಿಂಗ್ ಅನ್ನು ತೆಲುಗಿನಲ್ಲಿ ವೀಕ್ಷಿಸುತ್ತಾರೆ ಎಂದು ಎದುರು ನೋಡುತ್ತಿದ್ದೇನೆ ಎಂದು ಮಹೇಶ್​​ ಬಾಬು ತಿಳಿಸಿದ್ದಾರೆ.

ಚಿತ್ರದ ತೆಲುಗು ಟ್ರೇಲರ್​ ಅನ್ನು ಆಗಸ್ಟ್ 26ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ತೆಲುಗಿನಲ್ಲಿ ಪುಂಬಾ ಪಾತ್ರಕ್ಕೆ ಬ್ರಹ್ಮಾನಂದಂ, ಟಿಮೊನ್ ಪಾತ್ರಕ್ಕೆ ಅಲಿ ಧ್ವನಿ ನೀಡಲಿದ್ದಾರೆ. ಹಿಂದಿ ಆವೃತ್ತಿಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮುಫಾಸಾಗೆ ಧ್ವನಿ ನೀಡಲಿದ್ದಾರೆ, ಆರ್ಯನ್ ಖಾನ್ ಸಿಂಬಾಗೆ ಧ್ವನಿ ನೀಡಲಿದ್ದಾರೆ ಮತ್ತು ಅಬ್ರಾಮ್ ಖಾನ್ ಯುವ ಮುಫಾಸಾಗೆ ಧ್ವನಿ ನೀಡಲಿದ್ದಾರೆ. ಡಿಸೆಂಬರ್ 20ರಂದು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್​ ಆಗಲಿದೆ.

ತ್ರಿವಿಕ್ರಮ್ ನಿರ್ದೇಶನದ ಗುಂಟುರುಕರಂ ಚಿತ್ರದಲ್ಲಿ ಮಹೇಶ್ ಬಾಬು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸದ್ಯ ನಿರ್ದೇಶಕ ರಾಜಮೌಳಿ ಜತೆ SSMB29 ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.(ಏಜೆನ್ಸೀಸ್​​)