ನ್ಯೂಸ್

ಕೇರಳ ಮಿನಿ ಪಾಕಿಸ್ತಾನ.. ಭಯೋತ್ಪಾಕರಿಂದ ಪ್ರಿಯಾಂಕಾ ಗಾಂಧಿಗೆ ಜಯ; ಹೇಳಿಕೆಗೆ ಸಚಿವ ಕೊಟ್ಟ ಸ್ಪಷ್ಟನೆ ಹೀಗಿದೆ.. | Maharashtra

ಮುಂಬೈ: ಮಹಾರಾಷ್ಟ್ರದ(Maharashtra) ನೂತನ ಸಚಿವ ನಿತೇಶ್ ರಾಣೆ ಅವರ ವಿವಾದಾತ್ಮಕ ಹೇಳಿಕೆ ಬೆಳಕಿಗೆ ಬಂದಿದೆ. ಅವರು ಕಾಂಗ್ರೆಸ್​ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಸಚಿವ ನಿತೇಶ್ ರಾಣೆ ತಮ್ಮ ಹೇಳಿಕೆಯಲ್ಲಿ ಕೇರಳವನ್ನು ಮಿನಿ ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ. ಅಲ್ಲದೆ ಈ ಕಾರಣಕ್ಕಾಗಿಯೇ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಅವರು ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಕೇರಳ ಮಿನಿ ಪಾಕಿಸ್ತಾನವಾಗಿದೆ, ಅದಕ್ಕಾಗಿಯೇ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಅಲ್ಲಿಂದ ಆಯ್ಕೆಯಾಗಿದ್ದಾರೆ. ಎಲ್ಲಾ ಭಯೋತ್ಪಾದಕರು ಅವರಿಗೆ ಮತ ಹಾಕುತ್ತಾರೆ. ಇದು ನಿಜ, ನೀವು ಕೇಳಬಹುದು. ಅವರು ತಮ್ಮೊಂದಿಗೆ ಭಯೋತ್ಪಾದಕರನ್ನು ಕರೆದುಕೊಂಡು ಸಂಸದರಾಗಿದ್ದಾರೆ ಎಂದು ತಿಳಿಸಿದ್ದಾರೆ.

ನಿತೇಶ್ ರಾಣೆ ಅವರ ಹೇಳಿಕೆಗೆ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ ವಾಗ್ದಾಳಿ ನಡೆಸಿದೆ. ಪ್ರಧಾನಿ ಮೋದಿ ಕೇವಲ ಒಂದು ಲಕ್ಷ ಮತಗಳಿಂದ ಗೆದ್ದಿದ್ದರಿಂದ ಬಿಜೆಪಿ ನಾಯಕರು ಚಿಂತಿತರಾಗಿದ್ದಾರೆ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಗೆಲುವನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಶಿವಸೇನೆ (ಯುಬಿಟಿ) ನಾಯಕ ಆನಂದ್ ದುಬೆ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಇದು ನಿತೇಶ್ ರಾಣೆಯವರ ದುರದೃಷ್ಟಕರ ಹೇಳಿಕೆ. ಕೇರಳ ಭಾರತದ ಭಾಗವಾಗಿದೆ. ನಮ್ಮ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದಂತೆ ಆಗುತ್ತಿದೆ ಎಂದು ಹೇಳುವ ಮೂಲಕ ತಾವೇ ರಾಜ್ಯಪಾಲರಾಗಿದ್ದೇನೆ ಎಂದು ಅವರು ಭಾವಿಸಿದ್ದಾರೆ. ರಾಜ್ಯಪಾಲರಿಗೆ ಏಕೆ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಗೃಹ ಸಚಿವ ಅಮಿತ್ ಷಾ ಎಲ್ಲಾ ಏಜೆನ್ಸಿಗಳು ಅವರ ಅಡಿಯಲ್ಲಿವೆ. ಇದೊಂದು ಕೆಟ್ಟ ರಾಜಕೀಯ ಎಂದು ಅವರು ಹೇಳಿದ್ದಾರೆ.

ನಿತೇಶ್ ರಾಣೆ ಸ್ಪಷ್ಟನೆ

ಹೇಳಿಕೆ ವಿವಾದ ತಾರಕಕ್ಕೇರುತ್ತಿದ್ದಂತೆ ನಿತೇಶ್​​ ರಾಣೆ ಅವರು ಕೇರಳದ ಪರಿಸ್ಥಿತಿಯನ್ನು ಪಾಕಿಸ್ತಾನದೊಂದಿಗೆ ಹೋಲಿಕೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಕೇರಳವು ಭಾರತದ ಬಹುಪಾಲು ಭಾಗವಾಗಿದೆ. ಆದರೆ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಎಲ್ಲರೂ ಚಿಂತಿಸಬೇಕಾದ ವಿಷಯ. ಹಿಂದೂಗಳನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಾಗಿ (ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ) ಧಾರ್ಮಿಕವಾಗಿ ಪರಿವರ್ತಿಸುವುದು ಅಲ್ಲಿ ದಿನನಿತ್ಯದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಹಿಂದೂ ಮಹಿಳೆಯರನ್ನು ಗುರಿಯಾಗಿಸುವ ಲವ್ ಜಿಹಾದ್ ಪ್ರಕರಣಗಳು ಅಲ್ಲಿಯೂ ಹೆಚ್ಚುತ್ತಿವೆ. ನಾನು (ಕೇರಳದಲ್ಲಿನ) ಪರಿಸ್ಥಿತಿಯನ್ನು ಪಾಕಿಸ್ತಾನದೊಂದಿಗೆ ಹೋಲಿಸುತ್ತಿದ್ದೆ. ಪಾಕಿಸ್ತಾನದಲ್ಲಿ ಹಿಂದೂಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆಯೋ ಅಂತಹ ಸನ್ನಿವೇಶಗಳು ನಮ್ಮದೇ ದೇಶದಲ್ಲಿ ಸಂಭವಿಸಿದರೆ ನಾವು ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅದನ್ನೇ ನಾನು ನನ್ನ ಭಾಷಣದಲ್ಲಿ ಹೇಳಲು ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ.

ನಿತೀಶ್ ರಾಣೆ ಅವರು ಇತ್ತೀಚೆಗೆ ಮುಕ್ತಾಯಗೊಂಡ 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಂಕಾವ್ಲಿ ಕ್ಷೇತ್ರದಿಂದ ಗೆದ್ದಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ರಾಣೆ ಅವರಿಗೆ ಮೀನುಗಾರಿಕೆ ಮತ್ತು ಬಂದರು ಖಾತೆ ನೀಡಲಾಗಿದೆ. (ಏಜೆನ್ಸೀಸ್)