MahaKumbhaMela: ಇದೇ ಫೆ.5ರಂದು(ಬುಧವಾರ) ಪ್ರಯಾಗ್ರಾಜ್ಗೆ ಭೇಟಿ ನೀಡಲಿದ್ದು, ಭೇಟಿಯ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಗಂಗಾಮಾತೆಗೆ ಪೂಜೆ ಮಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆ ನೀಡಿದೆ.
ಸುಮಾರು 2 ಗಂಟೆಗಳ ಕಾಲ ಪ್ರಯಾಗ್ರಾಜ್ನಲ್ಲಿರಲಿದ್ದಾರೆ. ಭೇಟಿಯ ವೇಳೆ ನೇತ್ರಕುಂಭ ಮತ್ತು ರಾಜ್ಯಮಂಟಪಕ್ಕೆ ಭೇಟಿ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:INDVsEng ODI; ಟೀಮ್ ಇಂಡಿಯಾಗೆ ಬಿಗ್ ಶಾಕ್!: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಬುಮ್ರಾ ಔಟ್?
ಪ್ರಧಾನಿ ಬೆಳಗ್ಗೆ 10 ಗಂಟೆಗೆ ಬಮ್ರೌಲಿ ವಿಮಾನ ನಿಲ್ದಾಣದಕ್ಕೆ ಅಗಮಿಸಲಿದ್ದಾರೆ. ಬಳಿಕ 10.30ಕ್ಕೆ ಹೆಲಿಪ್ಯಾಡ್ ಮೂಲಕ ಡಿಪಿಎಸ್ ತಲುಪಲಿದ್ದಾರೆ.
ಪ್ರಧಾನಿಯವರು ಅರೈಲ್ ಘಾಟ್ನಿಂದ ದೋಣಿಯಲ್ಲಿ ಸಂಗಮಕ್ಕೆ ತೆರಳಿ ಬೆಳಿಗ್ಗೆ 11 ಗಂಟೆಗೆ ಅಲ್ಲಿಗೆ ತಲುಪಲಿದ್ದಾರೆ. ಪವಿತ್ರ ಸ್ನಾನ ಮಾಡಿದ ನಂತರ 11.45 ಕ್ಕೆ ಅರೈಲ್ ಘಾಟ್‌ಗೆ ಹಿಂತಿರುಗಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬಮ್ರೌಲಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ 12.30 ಕ್ಕೆ ಐಎಎಫ್ ವಿಮಾನದಲ್ಲಿ ದೆಹಲಿಗೆ ಹಿಂತಿರುಗಲಿದ್ದಾರೆ.(ಏಜೆನ್ಸೀಸ್)