ನ್ಯೂಸ್

ಕರೊನಾಕ್ಕೆ ಬಲಿಯಾದ ಲೆಫ್ಟಿನೆಂಟ್‌ ಜನರಲ್ ವೋಹ್ರಾ

ನವದೆಹಲಿ: 1971ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಅಪ್ರತಿಮ ಶೌರ್ಯ ಮೆರೆದಿದ್ದ ಲೆಫ್ಟಿನೆಂಟ್‌ ಜನರಲ್ ರಾಜ್‌ ಮೋಹನ್‌ ವೋಹ್ರಾ ಅವರು ಕರೊನಾ ವೈರಸ್​ಗೆ ಬಲಿಯಾಗಿದ್ದಾರೆ.

88 ವರ್ಷದ ವೋಹ್ರಾ ಅವರು ಮಹಾವೀರ ಚಕ್ರ ‍ಪ್ರಶಸ್ತಿ ಪುರಸ್ಕೃತರಾಗಿದ್ದರು. ವಯೋ ಸಹಜ ಹೃದಯ ಸಂಬಂಧಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಹೃದಯನಾಳಕ್ಕೆ ಸ್ಚಂಟ್ ಅಳವಡಿಸಿಕೊಳ್ಳುವ ಸಲುವಾಗಿ ಅವರು  ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಈ ವೇಳೆ ವೈದ್ಯರು ತಪಾಸಣೆ ನಡೆಸಿದಾಗ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ. ಚಿಕಿತ್ಸೆ ನೀಡಲಾಗುತ್ತಿದ್ದರೂ ಜೂನ್‌ 14 ರಂದು ಅವರು ಮೃತಪಟ್ಟಿದ್ದು, ಅಂದೇ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಮೂಲ ಹೇಳಿದೆ.

1971ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಅವರು ತೋರಿಸಿದ್ದ ಶೌರ್ಯಕ್ಕಾಗಿ 1972ರಲ್ಲಿ ಮಹಾವೀರ ಚಕ್ರ ‍ಪ್ರಶಸ್ತಿ ನೀಡಲಾಗಿತ್ತು. ಶಸ್ತ್ರಸಜ್ಜಿತ ಸೇನಾ ವಿಭಾಗದ ಮುಖ್ಯ ಕಮಾಂಡಿಂಗ್‌ ಆಗಿದ್ದ ಇವರು ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಜನರಲ್‌ ಕಮಾಂಡಿಂಗ್‌ ಆಫೀಸರ್‌ ಕೂಡ ಆಗಿದ್ದರು.