ಮುಂಬೈ: ಬಾಲಿವುಡ್‌ನ ಧಕ್ ಧಕ್ ಗರ್ಲ್ ಸಿನಿಮಾ ನಟಿ ಮಾಧುರಿ ದೀಕ್ಷಿತ್. ನಟಿ ಇಂದಿಗೂ ಪಡ್ಡೆ ಹುಡುಗರಿಗೆ ಸಖತ್ ಇಷ್ಟ. ಸೌಂದರ್ಯದ ಮೂಲಕವಾಗಿ ಸೆಳೆಯುವ ಈ ಹೀರೋಯಿನ್ ಬ್ಯೂಟಿ ಸಿಕ್ರೇಟ್ ಏನು ಎಂದು ಫ್ಯಾನ್ಸ್ ಕೇಳುತ್ತಿರುತ್ತಾರೆ. ಇದೀಗ ನಟಿ ಅವರ ಫಳ..ಫಳ ಎಂದು ಹೊಳೆಯವ ಕೂದಲಿನ ಕೇರ್ ಹೇಗೆ ಮಾಡುತ್ತಾರೆ ಎಂದು ಹಂಚಿಕೊಂಡಿದ್ದಾರೆ.
ಮಾಧುರಿ ದೀಕ್ಷಿತ್ ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ನಟಿ ಆಗಾಗ್ಗೆ ಪಾಕವಿಧಾನಗಳು, ಸಲಹೆಗಳು ಮತ್ತು ಕೆಲವು ಟೀಪ್ಸ್ ಹಂಚಿಕೊಳ್ಳುತ್ತೀರುತ್ತಾರೆ. ಈಗ ಅವರ ಹೇರ್ ಕೇರ್ ಹೇಗೆ ಇರುತ್ತದೆ ಎನ್ನುವ ಸಿಕ್ರೇಟ್ ರಿವೀಲ್ ಆಗಿದೆ.
ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಿರಿ, ಇದು ಆರೋಗ್ಯಕರ ಕೂದಲಿಗೆ ಬಹಳಷ್ಟು ಕೊಡುಗೆ ನೀಡುತ್ತದೆ. ಅರ್ಧ ಕಪ್ ತೆಂಗಿನ ಎಣ್ಣೆ, 15-20 ಕರಿಬೇವಿನ ಎಲೆಗಳು, 1 ಟೀ ಚಮಚ ಮೆಂತ್ಯದ ಬೀಜಗಳು ಹಾಗೂ 1 ಸಣ್ಣ ತುರಿದ ಈರುಳ್ಳಿ ಇವುಗಳನ್ನು ಎಲ್ಲವನ್ನೂ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಬೇಕು ಎಂದು ಎಣ್ಣೆ ಮಾಡುವ ವಿಧಾನ ರಿವೀಲ್ ಮಾಡಿದ್ದಾರೆ. ಕುದಿ ಬಂದ ನಂತರ ಅದನ್ನು ತಣ್ಣಗೆ ಮಾಡಲು ಇಡಬೇಕು. ಸಂಪೂರ್ಣವಾಗಿ ಆರಿದ ಮೇಲೆ ಒಂದು ಬಾಟಲಿಯಲ್ಲಿ ಇದನ್ನು ಶೋಧಿಸಿ ಇಟ್ಟುಕೊಳ್ಳಬೇಕು. ಎರಡು ದಿನಗಳ ನಂತರ ಅದನ್ನು ಉಪಯೋಗಿಸ ಬೇಕಂತೆ. ಮೂರು ದಿನಕ್ಕೊಮ್ಮೆ ರಾತ್ರಿ ಇದನ್ನು ಚೆನ್ನಾಗಿ ತಲೆಗೆ ಮಸಾಜ್ ಮಾಡಿಕೊಂಡು ಮರುದಿನ ಬೆಳಗ್ಗೆ ತಲೆ ಸ್ನಾನ ಮಾಡಬೇಕಂತೆ.
1 ಕತ್ತರಿಸಿದ ಬಾಳೆಹಣ್ಣು, 2 ಚಮಚ ಕಪ್ ಮೊಸರು, 2 ಚಮಚ ಸ್ವಲ್ಪ ಜೇನುತುಪ್ಪ. ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ತಲೆಸ್ನಾನ ಮಾಡುವ 30-40 ನಿಮಿಷಗಳ ಮೊದಲು ತಲೆಗೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಬೇಕು. 30-40 ನಿಮಿಷಗಳ ಬಳಿಕ ನೀವು ಬಳಸುವ ಶ್ಯಾಂಪೂವನ್ನು ಹಾಕಿ ತಲೆಗೂದಲನ್ನು ತೊಳೆದುಕೊಳ್ಳಬೇಕು. ಇದಾದ ಮೇಲೆ ಕಂಡೀಷನರ್ ಹಾಕದೇ ಇದ್ದರೆ ಒಳ್ಳೆಯದು. ಈ ಹೇರ್ ಮಾಸ್ಕ್ ಉಪಯೋಗಿಸುತ್ತಿದ್ದರೆ ಕೂದಲು ಸಾಫ್ಟ್ ಆಗಿ ಹೊಳೆಯುತ್ತಲಿರುತ್ತದೆ.
90ರ ಕಾಲಘಟ್ಟದಲ್ಲಿ ಮಾಧುರಿ ದೀಕ್ಷಿತ್ ನಂಬರ್ ಒನ್ ನಾಯಕಿಯಾಗಿದ್ದರು. ಈಗಲೂ ಕೂಡಾ ಮಾಧುರಿ ಅವರು ದಅಎ ವರ್ಚಸ್ಸು ಹಾಗೂ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.