ರಾಯಚೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿದ್ದಾಳೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ರಾಯಚೂರಿನ ಸಿಂಗನೋಡಿ ತಾಂಡಾದಲ್ಲಿ ಈ ಘಟನೆ ನಡೆದಿದೆ.
ರಾಜು ನಾಯ್ಕ್ (38) ಕೊಲೆಯಾದ ವ್ಯಕ್ತಿ. ಸ್ನೇಹಾ ಕೊಲೆ ಆರೋಪಿ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿದ್ದಾಳೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ನಡೆದಿದ್ದೇನು?: ರಾಜು ನಾಯ್ಕ್, ಸ್ನೇಹಾ ಅವರದ್ದು ಸುಖದ ಸಂಸಾರವಾಗಿತ್ತು. ದಂತಿ ವಾಸವಾಗಿರುವ ಗ್ರಾಮಕ್ಕೆ ದೇವಸ್ಥಾನದ ಗೋಪುರ ಕಟ್ಟಲು ಬಂದಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿ ಜತೆಗೆ ಸ್ನೇಹಾ ಸಲುಗೆಯನ್ನು ಬೆಳೆಸಿದ್ದಳು. ಸ್ನೇಹಾ ಆತನೊಟ್ಟಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕದ್ದು ಮುಚ್ಚಿ ಆತನೊಟ್ಟಿಗೆ ಸೇರುತ್ತಿದ್ದಳು. ಒಂದು ದಿನ ಪತಿ ರಾಜುಗೆ ಈ ವಿಚಾರ ತಿಳಿಯಿತ್ತು. ಇದನ್ನು ಇಲ್ಲಿಗೆ ನಿಲ್ಲಿಸುವಂತೆ ಹಲವು ಬಾರಿ ಪತ್ನಿಗೆ ಬುದ್ಧಿವಾದ ಹೇಳಿದ್ದಾನೆ. ಈ ಕುರಿತಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಲೆ ಇತ್ತು. ಆದ್ರೆ ಸ್ನೇಹ ಮಾತ್ರ ಬದಲಾಗಿರಲಿಲ್ಲ.
ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಕ್ಕೆ ಸ್ನೇಹಾ ಆತನನ್ನು ಮುಗಿಸಿಬಿಡುವ ಪ್ಲ್ಯಾನ್ ಮಾಡಿದ್ದಳು. ಪತಿಗಿದ್ದ ಕುಡಿತವನ್ನೇ ಬಂಡವಾಳ ಮಾಡಿಕೊಂಡ ಸ್ನೇಹ, ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಳು. ಅದನ್ನೂ ಕುಡಿಯುತ್ತಿದ್ದಂತೆ ರಾಜು ನಿದ್ರೆಗೆ ಜಾರಿದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಈ ಸಂಬಂಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಶರತ್ ಬಾಬು ಜತೆ ಮಗು ಆಗಬೇಕು ಅಂತ ಆಸೆ ಇತ್ತು..ಆದ್ರೆ ಅದು ಆಗಲಿಲ್ಲ ಎಂದ್ರು ಖ್ಯಾತ ನಟಿ