Apologizes: ಕನ್ನಡ ಚಿತ್ರರಂಗದ ಕಲಾವಿದ ಮಡೆನೂರು ಮನು ಇತ್ತೀಚಿಗೆ ಲೈಂಗಿಕ ಕಿರುಕುಳ ವಂಚನೆ ಪ್ರಕರಣದಲ್ಲಿ ಜೈಲು ಸೇರಿ ಸುದ್ದಿಯಲ್ಲಿದ್ದರು. ಇದೀಗ ಮನು ಮತ್ತೆ ಸದ್ದಿಯದ್ದು, ಡಾ.ಶಿವರಾಜ್ ಕುಮಾರ್(ಶಿವಣ್ಣ) ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲೈಂಗಿಕ ಕಿರುಕುಳ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ವೇಳೆ ಮನು, ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್ ಆಗಿತ್ತು. ಕೂಡಲೇ ಆತನ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಡಾ. ರಾಜಕುಮಾರ್, ಡಾ. ಶಿವರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಅಭಿಮಾನಿ ಸಂಘದಿಂದ ಪ್ರತಿಭಟಿಸಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ:ವರದಕ್ಷಿಣೆ ಕಿರುಕುಳ ಆರೋಪ; 3 ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಉಪನ್ಯಾಸಕಿ ಆತ್ಮಹತ್ಯೆ| Dowry Harassment
ಆಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಮನು, ಆಡಿಯೋ ನನ್ನದಲ್ಲ.. ನನ್ನದಲ್ಲದಿದ್ದರೂ ನಾನು ಹಲವು ಬಾರಿ ಶಿವಣ್ಣ ಭೇಟಿ ಮಾಡಲು ಪ್ರಯತ್ನ ಮಾಡಿದ್ದೆನು. ಅದು ಸಾಧ್ಯವಾಗಲಿಲ್ಲ. ಇದೀಗ ಶಿವಣ್ಣ ಭೇಟಿ ಮಾಡಿ ಕ್ಷಮೆ ಕೇಳಿದ್ದೆನೆ ಎಂದಿದ್ದಾರೆ.
ಶಿವಣ್ಣ ಕಾರಿನಿಂದ ಹೊರ ಬರುತ್ತಿದ್ದಂತೆ ಮಡೆನೂರು ಮನು, ಶಿವರಾಜ್ ಕುಮಾರ್ ಅವರ ಕಾಲಿಗೆ ಬಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ, ಮಡೆನೂರು ಮನು ತನ್ನ ಅಧಿಕೃತ ಖಾತೆ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ''ಅಂತೂ ಇಂತೂ ಒಂದು ಕೆಟ್ಟ ಗಳಿಗೆನಾ ದಾಟಿ ಕೊನೆದಾಗಿ ಶಿವಣ್ಣ ಆಶೀರ್ವಾದ ಮಾಡಿದ್ರು... ಜೈ ಶಿವಣ್ಣ ಜೈ ದರ್ಶನ್ ಸರ್ ಜೈ ಧ್ರುವಣ್ಣ ಯಾವತ್ತು ನಿಮಗೆ ನಿಮ್ಮ ಅಭಿಮಾನಿಗಳಿಗೆ ಚಿರಋಣಿಯಾಗಿರುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
ನಾನು ಮೂವರ ಬಗ್ಗೆಯೂ ಮಾತನಾಡಿಲ್ಲ. ನಾನು ಮೊದಲು ದೊಡ್ಡವರನ್ನು (ಶಿವಣ್ಣ) ಭೇಟಿ ಮಾಡಿ, ಸತ್ಯವನ್ನು ವಿವರಿಸಿ ಕ್ಷಮೆ ಕೇಳುತ್ತೇನೆ ಎಂದು ಮನು ಜೈಲಿನಿಂದ ಹೊರ ಬಂದ ಬಳಿಕ ಹೇಳಿದ್ದರು. ನನ್ನ ಮೂರು ವರ್ಷಗಳ ಶ್ರಮವನ್ನು ಹಾಳು ಮಾಡಿದರು. ಐದಾರು ಮಂದಿ ಪಕ್ಕಾ ಪ್ಲಾನ್ ಮಾಡಿ ನನ್ನನ್ನು ಮುಗಿಸಿದರು. ಸಾಕಷ್ಟು ಅಡೆತಡೆಗಳ ನಡುವೆ ಸಿನಿಮಾ ರಿಲೀಸ್ ಆಯ್ತು. ನನ್ನ ವಿರುದ್ಧ ಪ್ರತಿ ಹಂತದಲ್ಲಿಯು ಷಡ್ಯಂತ್ರ ನಡೆಯಿತು. ಸಿನಿಮಾ ರಿಲೀಸ್ಗು ಮೊದಲು ಕುಣಿಗಲ್ ಬಳಿ ಮೊಟ್ಟೆ ಹೊಡೆದರು. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಯಲ್ಲಿದ್ದವರೇ ಕೇಸ್ ಮಾಡಿಸಿದರು ಎಂದು ಮನು ಆರೋಪಿಸಿದ್ದರು.