ಬೆಂಗಳೂರು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎಲ್ಲಿ ಅಡಗಿದ್ದಾರೆ ಎನ್ನುವ ಬಗ್ಗೆ ಅಧಿಕಾರಿಗಳು ಭಾರಿ ಶೋಧ ನಡೆಸುತ್ತಿದ್ದಾರೆ. ಇವರು ದಾವಣಗೆರೆಯಲ್ಲೇ ಸ್ನೇಹಿತರೊಬ್ಬರ ಮನೆಯಲ್ಲಿ ಊಟ ತಿಂಡಿ ಮಾಡಿಕೊಂಡು ವಾಸವಿದ್ದಾರೆ ಎನ್ನಲಾಗುತ್ತಿದೆ.
ಮಗ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಮಾಡಾಳ್ ಕೂತಿದ್ದರು. ವಿರೂಪಾಕ್ಷಪ್ಪ ಕಳೆದೆರಡು ದಿನದ ಹಿಂದೆ ಚಿತ್ರದುರ್ಗ ಬಾರ್ಡರ್ ನಲ್ಲೇ ಲಾಸ್ಟ್ ಕಾಲ್ ಮಾಡಿದ್ದರು. ಆಗ ಅದು ಕರೆ ಮಾಡಿದ್ದು ತನ್ನ ಪಕ್ಷದ ಮುಖಂಡರೊಬ್ಬರಿಗೆ.
ನಂತರ ಫೋನ್ ಸ್ವಿಚ್ ಆಫ್ ಮಾಡಿ ತಣ್ಣಗೆ ದಾವಣಗೆರೆ ಹಾದಿ ಹಿಡಿದ್ದರು ಎನ್ನಲಾಗುತ್ತಿದೆ. ಯಾರೋ ತಮ್ಮವರೇ ಷಡ್ಯಂತ್ರ ಮಾಡಿದ್ದಾರೆ ಎನ್ನುವ ಅನುಮಾನದಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಕೂತಿದ್ದಾರೆ ಎಂದು ಹೇಳಲಾಗುತ್ತಿದೆ. ಲೋಕಾಯುಕ್ತ ಎದುರು ಶರಣಾದ್ರೆ ಮುಜುಗರ ಕಟ್ಟಿಟ್ಟಬುತ್ತಿ ಎಂದು ತಿಳಿದಿರುವ ಮಾಡಾಳ್, ಅದಕ್ಕಾಗಿ ಸೋಮವಾರ ಲೋಕಾಯುಕ್ತ ವಿಶೇಷಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಇದೆ.
ನ್ಯಾಯಾಲಯದಲ್ಲಿ ತಮಗಿರುವ ಆರೋಗ್ಯದ ಸಮಸ್ಯೆಯನ್ನ ಮುಂದಿಟ್ಟುಕೊಂಡು ಜೈಲಿನಿಂದ ದೂರ ಉಳಿಯಲು ಪ್ರಯತ್ನ ಮಾಡುವ ಸಾಧ್ಯತೆ ಹೆಚ್ಚಾಗಿದೆ.