ಆಂಧ್ರಪ್ರದೇಶ: ನಾರ್ನೆ ನಿತಿನ್, ಸಂಗೀತ್ ಶೋಭನ್, ರಾಮ್ ನಿತಿನ್ ಹಾಗೂ ಗೌರಿ ಪ್ರಿಯಾ ರೆಡ್ಡಿ, ಅನಾನಾತಿಕಾ ಸನಿಲ್‌ಕುಮಾರ್, ಗೋಪಿಕಾ ಉದ್ಯಾನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ ತೆಲುಗು ಚಿತ್ರ 'ಮ್ಯಾಡ್' ಇದೇ ಅಕ್ಟೋಬರ್ 6 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯ ಚಿತ್ರದ ಅಧಿಕೃತ ಟ್ರೇಲರ್ ಇಂದು ತೆರೆಕಂಡಿದೆ.
ಇದನ್ನೂ ಓದಿ: ಕೌಶಲ್ಯಾಭಿವೃದ್ಧಿ ನಿಗಮ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡುಗಿಲ್ಲ ರಿಲೀಫ್; ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ಕಲ್ಯಾಣ್ ಶಂಕರ್ ನಿರ್ದೇಶನದ ಈ ಚಿತ್ರವು ಯುವಜನತೆಗೆ ಹೆಚ್ಚು ಹತ್ತಿರವಾಗಲಿದೆ ಹಾಗೂ ಮನರಂಜನೆ ನೀಡಲಿದೆ ಎಂದು ಈ ಹಿಂದೆಯೇ ಚಿತ್ರತಂಡ ತಿಳಿಸಿತ್ತು. ಟ್ರೇಲರ್ಗಾಗಿ ಕುತೂಹಲ ವ್ಯಕ್ತಪಡಿಸಿದ್ದ ಸಿನಿಪ್ರೇಕ್ಷಕರಿಗೆ ಇಂದು ಸಿನಿಮಾದ ಒಂದು ಮುನ್ನೋಟ ದೊರಕಿದೆ. ಇಂದು 'ಮ್ಯಾಡ್' ಟ್ರೇಲರ್ನ ಡಿಜಿಟಲ್ ಲಾಂಚ್ ಅನ್ನು ಟಾಲಿವುಡ್ ಸ್ಟಾರ್, 'ಆರ್ಆರ್ಆರ್ ಖ್ಯಾತಿಯ ನಟ ಜೂ. ಎನ್ಟಿಆರ್ ಅನಾವರಣಗೊಳಿಸಿದರು.
ಮೂವರು ಸ್ನೇಹಿತರ ಜೀವನದಲ್ಲಿ ನಡೆಯುವ ಘಟನೆಗಳು, ಕಾಲೇಜು ದಿನಗಳಲ್ಲಿ ಎದುರಾಗುವ ಹಾಸ್ಯ ಪ್ರಸಂಗಗಳು ಸಿನಿಮಾದ ಕಥಾಹಂದರ ಎಂದು ಹೇಳಲಾಗಿದೆ. ಈ ಚಲನಚಿತ್ರ ಯುವಕರು, ಯುವಕರಿಗಾಗಿ ರಚಿಸಲಾಗಿದೆ. ಅವರಿಗೆ ಚಿತ್ರಮಂದಿರಗಳಲ್ಲಿ ಮನರಂಜನೆ ಮತ್ತು ಉತ್ತಮ ಅನುಭವವನ್ನು ನೀಡಲಿದೆ ಎಂದು ಚಿತ್ರ ತಯಾರಕರು ಹೇಳಿದ್ದಾರೆ,(ಏಜೆನ್ಸೀಸ್).