ನ್ಯೂಸ್

ಕೇಂದ್ರ ಸಚಿವ ಬಾಬುಲ್ ಸುಪ್ರಿಯೊಗೆ ಎರಡನೇ ಬಾರಿಗೆ ಕರೊನಾ ದೃಢ

ಕೋಲ್ಕತ: ದೇಶದಲ್ಲಿ ಕರೊನಾ ಎರಡನೇ ಅಲೆ ಆರಂಭವಾಗಿದೆ. ಈಗಾಗಲೇ ಒಂದು ಬಾರಿ ಸೋಂಕು ದೃಢವಾಗಿದ್ದವರಿಗೂ ಇದೀಗ ಮತ್ತೊಮ್ಮೆ ಸೋಂಕು ದೃಢವಾಗಲಾರಂಭಿಸಿದೆ. ಅದೇ ರೀತಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರಲ್ಲೂ ಎರಡನೇ ಬಾರಿಗೆ ಸೋಂಕು ಕಾಣಿಸಿಕೊಂಡಿದೆ.

ಈ ಕುರಿತಾಗಿ ಬಾಬುಲ್ ಅವರು ಟ್ವೀಟ್​ ಮಾಡಿದ್ದಾರೆ. ನನಗೆ ಮತ್ತು ನನ್ನ ಹೆಂಡತಿ ರಚನಾ ಶರ್ಮಾ ಇಬ್ಬರಿಗೂ ಸೋಂಕು ದೃಢವಾಗಿದೆ. ನನಗೆ ಎರಡನೇ ಬಾರಿಗೆ ಸೋಂಕು ತಗುಲಿದೆ. ಟಿಎಂಸಿ ಗೂಂಡಾಗಳು ಉಗ್ರತನ ತೋರುತ್ತಿರುವಾಗ ನಾನು ಬೀದಿಗಿಳಿಬೇಕೆಂದುಕೊಂಡಿದ್ದೆ. ಮತ ಹಾಕಿ ನಮ್ಮ ಪಕ್ಷವನ್ನು ಗೆಲ್ಲಿಸಬೇಕೆಂದುಕೊಂಡಿದ್ದೆ. ಆದರೆ ನಾನು ಮತ ಹಾಕಲು ಸಾಧ್ಯವಿಲ್ಲ ಎನ್ನುವ ಬಗ್ಗೆ ಬೇಜಾರಿದೆ ಎಂದು ಅವರು ಹೇಳಿದ್ದಾರೆ.

ಆದರೆ ನಾನು ಪಕ್ಷದ ಕಾರ್ಯಗಳನ್ನು ಕ್ವಾರಂಟೈನ್​ನಲ್ಲಿದ್ದುಕೊಂಡೇ ಮಾಡಲಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಎಂಟು ಹಂತಗಳ ಚುನಾವಣೆಯಲ್ಲಿ ಈಗಾಗಲೇ ಆರು ಹಂತಗಳು ಮುಗಿದಿವೆ. ಏಳು ಮತ್ತು ಎಂಟನೇ ಹಂತದ ಚುನಾವಣೆ ಏಪ್ರಿಲ್​ 26 ಹಾಗೂ 29ರಂದು ನಡೆಯಲಿದೆ. ಚುನಾವಣೆಯ ಫಲಿತಾಂಶ ಮೆ 2ರಂದು ಹೊರಬೀಳಲಿದೆ. (ಏಜೆನ್ಸೀಸ್)