ನ್ಯೂಸ್

ಶ್ವಾಸಕೋಶ ಕ್ಯಾನ್ಸರ್: ಧೂಮಪಾನ ಮಾಡದವರಲ್ಲೂ ಏಕೆ ಸಂಭವಿಸುತ್ತೆ ಅನ್ನೋದಕ್ಕೆ ಇಲ್ಲಿದೆ ಕಾರಣ..Lung Cancer

Lung Cancer: ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಅಪಾಯಕಾರಿ ಅಂಶವಾಗಿದ್ದರೂ, ಎಂದಿಗೂ ಧೂಮಪಾನ ಮಾಡದ ಅನೇಕ ಜನರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಧೂಮಪಾನ ಮಾಡದೇ ಇರುವ ವ್ಯಕ್ತಿಗಳಲ್ಲಿ ಶೇ. 10-30 ರಷ್ಟು ಜನರು ಈ ರೋಗದಿಂದ ಬಳಲುತ್ತಾರೆ. ಹಾಗೆಯೇ ಧೂಮಪಾನ ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುವ 5 ಅಂಶಗಳನ್ನು ಇತ್ತೀಚೆಗೆ ಗುರುತಿಸಲಾಗಿದೆ. ಇದರ ಜೊತೆಗೆ ಶ್ವಾಸಕೋಶದ ಕ್ಯಾನ್ಸರ್​ನಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

ರೇಡಾನ್ ಅನಿಲಕ್ಕೆ ಒಡ್ಡಿಕೊಳ್ಳುವುದು

ರೇಡಾನ್ ವಾಸನೆಯಿಲ್ಲದ, ಅದೃಶ್ಯ ಅನಿಲವಾಗಿದ್ದು, ನೈಸರ್ಗಿಕವಾಗಿ ಭೂಗತ ಮೂಲಗಳಿಂದ ಹೊರಹೊಮ್ಮುತ್ತದೆ. ಮಣ್ಣು ಅಥವಾ ಬಂಡೆಗಳಲ್ಲಿ ಯುರೇನಿಯಂ ವಿಭಜನೆಯ ಪ್ರಕ್ರಿಯೆಯು ಈ ಅನಿಲವನ್ನು ಉತ್ಪಾದಿಸುತ್ತದೆ. ಕಟ್ಟಡ ಅಥವಾ ಮಣ್ಣಿನ ಮೇಲೆ ಕುಳಿತಾಗ, ನೆಲ ಮತ್ತು ಗೋಡೆಯ ಬಿರುಕುಗಳ ಮೂಲಕ ಅನಿಲವು ಮನೆಯನ್ನು ಪ್ರವೇಶಿಸುತ್ತದೆ. ಇವುಗಳ ಜೊತೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತದೆ.

ಸೆಕೆಂಡ್ ಹ್ಯಾಂಡ್ ಸ್ಮೋಕ್​

ಸೆಕೆಂಡ್ ಹ್ಯಾಂಡ್ ಸ್ಮೋಕ್ ಎಂಬ ಪದವು ಸಿಗರೇಟ್ ಬಿಡುವಂತಹ ಹೊಗೆಯನ್ನು ಇತರರು ಉಸಿರಾಡುವುದನ್ನು ಸೂಚಿಸುತ್ತದೆ.ಈ ಹೊಗೆಯು ಶ್ವಾಸಕೋಶದ ಕ್ಯಾನ್ಸರ್​ ಬರುವ ಮುನ್ಸೂಚನೆಯಾಗಿರುತ್ತದೆ. ಇದರಿಂದ ಅನೇಕ ಸಾವುಗಳಾಗಿರುವ ಪ್ರಕರಣಗಳಿವೆ. ಧೂಮಪಾನಿಗಳೊಂದಿಗೆ ವಾಸಿಸುವಂತಹ ಜನರ ಮೇಲೂ ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಪರಿಸರ ಕ್ಯಾನ್ಸರ್ ಕಾರಕಗಳು

ಜನರು ತಮ್ಮ ಕೆಲಸದ ಸಮಯದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವಾಗ ಕ್ಯಾನ್ಸರ್ ಉಂಟುಮಾಡುವ ವಸ್ತುಗಳಿಗೆ ಒಡ್ಡಿಕೊಳ್ಳುತ್ತಾರೆ. ಕಾರ್ಮಿಕರು, ಗಣಿಗಾರಿಕೆಯಲ್ಲಿ ಕೆಲಸ ಮಾಡುವಂತಹ ಜನರಲ್ಲಿ ಅಧಿಕವಾಗಿ ಈ ರೋಗ ಪತ್ತೆಯಾಗುತ್ತದೆ. ಇನ್ನು ಭಾರವಾದ ಲೋಹಗಳೊಂದಿಗೆ ಬೆಂಜೀನ್ ಮತ್ತು ಡೀಸೆಲ್ ಹೊರಸೂಸುವಿಕೆಯ ಸಂಯೋಜನೆಯು ಹೆಚ್ಚುವರಿ ಕಾಯಿಲೆಗೆ ತುತ್ತಾಗಬಹುದು.

ವಾಯು ಮಾಲಿನ್ಯ

ವಾಹನಗಳು, ಕಾರ್ಖಾನೆಗಳು ಹಾಗೂ ವಿದ್ಯುತ್ ಸ್ಥಾವರಗಳು ಬಿಡುವಂತಹ ವಿಷಾನಿಲದಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಹಾಗೇ ಈ ಅನಿಲಗಳೊಂದಿಗೆ ಗಾಳಿಯಲ್ಲಿರುವ ವಿಷಾನಿಲಗಳು ಸೇರಿಕೊಂಡು ಮಾನವನನ್ನು ಸ್ಪರ್ಶಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್​ ಪ್ರಕರಣಗಳು ಹೆಚ್ಚುತ್ತವೆ.

ಆನುವಂಶಿಕ ಅಂಶಗಳು ಮತ್ತು ರೂಪಾಂತರಗಳು

ಶ್ವಾಸಕೋಶದ ಕ್ಯಾನ್ಸರ್​ಗಳು ಬರೀ ಹೊರಗಿನ ಗಾಳಿಯಿಂದ ಮಾತ್ರ ಬರುವುದಿಲ್ಲ. ಬದಲಾಗಿ, ಅನುವಂಶಿಕ ಗುಣಗಳಿಂದಲೂ ಸಹ ಬರುತ್ತವೆ. ಅಂದರೆ, ತಂದೆ ಅಥವಾ ತಾಯಿ ಈ ಕಾಯಿಲೆಯಿಂದ ಬಳಲುತ್ತಿದ್ದರೆ ಅನುವಂಶಿಕವಾಗಿ ಮಕ್ಕಳಲ್ಲೂ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಶ್ವಾಸಕೋಶದ ಕ್ಯಾನ್ಸರ್​​ನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವ ವಿಧಾನಗಳು

* ರೇಡಾನ್ ಅನಿಲಗಳು ನಿಮ್ಮ ಮನೆಗಳಲ್ಲಿ ಹರಡುವುದರಿಂದ ಒಂದು ಬಾರಿ ಮನೆಯನ್ನು ಪರೀಕ್ಷೆ ಮಾಡಿಸುವುದು ಉತ್ತಮ ವಿಧಾನವಾಗಿದೆ

* ನೀವು ಧೂಪಪಾನಿಗಳೊಂದಿಗೆ ವಾಸಿಸುತ್ತಿದ್ದರೆ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಬೇಕು

* ಮಾಲಿನ್ಯ ಇರುವಂತಹ ಪ್ರದೇಶಗಳಲ್ಲಿ ಮುಖಕ್ಕೆ ಮಾಸ್ಕ್​ ಧರಿಸುವುದರಿಂದ ವಿಷಾನಿಲಗಳನ್ನು ತಡೆಯಲು ಸಹಾಯವಾಗುತ್ತದೆ

* ಅಡುಗೆಗಾಗಿ ಶುದ್ಧ ಅನಿಲವನ್ನು ಆಯ್ಕೆಮಾಡಬೇಕು

* ಅಪಾಯಕಾರಿ ಜಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವಂತವರು ತಮ್ಮ ಆರೋಗ್ಯದ ಕಡೆ ನಿಗಾವಹಿಸಬೇಕು

* ಶ್ವಾಸಕೋಶದ ಕ್ಯಾನ್ಸರ್​ ಕುಟುಂಬದಲ್ಲಿ ಯಾರಿಗಾದರೂ ಇದ್ದಲ್ಲಿ ಮನೆಯವರು ಆರೋಗ್ಯ ತಪಾಸಣೆ ಮಾಡಿಸುವುದರಿಂದ ರೋಗಕ್ಕೆ ಒಳಪಡದಂತೆ ಪಾರಾಗಬಹುದು. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.