ನ್ಯೂಸ್

ಐಸಿಯುಗೆ ಶೂ ಧರಿಸಿ ಹೊರಟಿದ್ದವರನ್ನು ತಡೆದ ಆಸ್ಪತ್ರೆ ಸಿಬ್ಬಂದಿ: ಬುಲ್ಡೋಜರ್‌​ ಕರೆಸಿ ದರ್ಪ ತೋರಿಸಿದ ಮೇಯರ್​​

ಲಕ್ನೋ: ನಾಯಕರು ಸಮಾಜಸೇವಕರಾಗಿ, ತಾಳ್ಮೆಯಿಂದ, ಜನರಿಗೆ ಆದರ್ಶಪ್ರಾಯರಾಗಿದ್ದ ಕಾಲವೊಂದಿತ್ತು. ಆದರೆ ಜಗತ್ತು ಮುಂದುವರೆದಂತೆ ಜನರ ಜೊತೆಗೆ ನಾಯಕರ ಸಂವೇದನೆ ಶೂನ್ಯವಾಗುತ್ತಿದೆ. ಮೇಯರ್​ವೊಬ್ಬರು ಐಸಿಯುನಲ್ಲಿ ಶೂ ಧರಿಸಿಬೇಡಿ ಎಂದಿದ್ದಕ್ಕೆ ಬುಲ್ಡೋಜರ್ ಕರೆಸಿ ತಮ್ಮ ಅಧಿಕಾರದ ದರ್ಪ ತೋರಿಸಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ನಗರದ ವಿನಾಯಕ್ ಆಸ್ಪತ್ರೆಗೆ ಮೇಯರ್​ ಸುಷ್ಮಾ ಖಾರ್ಕವಾಲ್, ಐಸಿಯು ಘಟಕದಲ್ಲಿ ದಾಖಲಾಗಿದ್ದ ಪಾಲಿಕೆಯ ನೌಕರರನ್ನು ನೋಡಲು ಬಂದಿದ್ದು. ಐಸಿಯು ಮಾರ್ಗಸೂಚಿಗಳ ಪ್ರಕಾರ ಯಾರೂ ಶೂ ಧರಿಸಿ ಅಲ್ಲಿಗೆ ಹೋಗುವಂತಿಲ್ಲ. ಇದೇ ಕಾರಣಕ್ಕೆ ಶೂ ಧರಿಸಿ ಐಸಿಯು ವಾರ್ಡ್‌ಗೆ ಪ್ರವೇಶಿಸುತ್ತಿದ್ದ ಮೇಯರ್ ಸುಷ್ಮಾ ಖಾರ್ವಾಲ್‌ಗೆ ವೈದ್ಯರು ಅಡ್ಡಿಪಡಿಸಿದರು. ಆದರೆ ಇದು ಮೇಯರ್ ಅಸಮಾಧಾನಕ್ಕೆ ಕಾರಣವಾಗಿತ್ತು.


ಅಲ್ಲದೇ ಮೇಯರ್​, ಪಾಲಿಕೆ ಅಧಿಕಾರಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದದ್ದು, ಇದರಿಂದ ಸಿಟ್ಟಿಗೆದ್ದ ಮೇಯರ್ ಕೂಡಲೇ ಮಹಾನಗರ ಪಾಲಿಕೆಯ ಬುಲ್ಡೋಜರ್ ಗೆ ಕರೆ ಮಾಡಿದ್ದಾರೆ. ಮಹಾನಗರ ಪಾಲಿಕೆಯ ಬುಲ್ಡೋಜರ್ ತಲುಪಿದ ಕೂಡಲೇ ಆಸ್ಪತ್ರೆ ಸಿಬ್ಬಂದಿ ಗಲಾಟೆ ಆರಂಭಿಸಿದ್ದು, ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

ಆದರೆ ಆತಂಕದ ವಿಷಯವೆಂದರೆ ಮೇಯರ್ ಸುಷ್ಮಾ ಖರ್ವಾಲ್ ಬುಲ್ಡೋಜರ್​​ನ್ನು ಕರೆದಿದ್ದು, ಆಸ್ಪತ್ರೆಯಲ್ಲಿ ಅದಾಗಲೇ ಅನೇಕ ರೋಗಿಗಳ ಚಿಕಿತ್ಸೆ ನಡೆಯುತ್ತಿತ್ತು.ಮೇಯರ್​​ರ ಈ ನಡವಳಿಕೆಯನ್ನು ಕಂಡು ಜನರು ಸಹ ಅಚ್ಚರಿಗೊಂಡಿದ್ದಾರೆ.(ಏಜೆನ್ಸೀಸ್)