ನ್ಯೂಸ್

ಹೋಳಿ ಹಬ್ಬಕ್ಕೆ LPG​​ ಮತ್ತೆ ದುಬಾರಿ; ನಿಮ್ಮ ನಗರದಲ್ಲಿನ ಹೊಸ ಸಿಲಿಂಡರ್​ನ ಬೆಲೆ ತಿಳಿಯಿರಿ

LPG: ಹಬ್ಬದ ಋತುವಿನಲ್ಲಿ ಹಣದುಬ್ಬರದ ಆಘಾತ ಉಂಟಾಗಿದ್ದು, ಹೋಳಿ ಮತ್ತು ರಂಜಾನ್ ಹಬ್ಬಗಳಲ್ಲಿ ಅಡುಗೆ ಅನಿಲ(LPG) ದುಬಾರಿಯಾಗಿದೆ. ಹೌದು, ಸರ್ಕಾರಿ ತೈಲ ಕಂಪನಿಗಳು LPG ಸಿಲಿಂಡರ್‌ಗಳ ಬೆಲೆಯಲ್ಲಿ ಹೆಚ್ಚಳವನ್ನು ಇದೀಗ ಘೋಷಿಸಿವೆ.

ಇಂದಿನಿಂದಲೇ ಜಾರಿ ಬರಲಿದ್ದು (ಮಾ.1, 2025), 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸಲಾಗಿದೆ. ಇಂಡಿಯನ್ ಆಯಿಲ್ ಮಾ.1 ರಿಂದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 6 ರೂ. ಹೆಚ್ಚಿಸಿದ್ದು, ಈ ಹಿಂದೆ 1797 ರೂ. ಇದ್ದ ಪ್ರತಿ ಸಿಲಿಂಡರ್‌ಗೆ 1803 ರೂ.ಗೆ ಏರಿಕೆಯಾಗಿದೆ.

ಅಲ್ಲದೆ, ಇದೇ ಮಾರ್ಚ್​ ತಿಂಗಳಲ್ಲಿ ಹೋಳಿ ಹಬ್ಬ ಸೇರಿಂದಂತೆ ರಂಜಾನ್​ ಮತ್ತು ಮದುವೆ ಸಮಾರಂಭಗಳು ಕೂಡು ಇವೆ.ಹೀಗಾಗಿ, ಬೆಲೆ ಏರಿಕೆ ಮಾಡಲಾಗಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

ಮಾ.1ರಿಂದ LPG(19KG) ಹೊಸ ದರ ಹೀಗಿದೆ

1.ದೆಹಲಿ:1,997(ಹಳೆ ದರ)- 1,803 ರೂ.(ಹೊಸ ದರ)

2.ಕೊಲ್ಕತ್ತ:1,907-1,913 ರೂ.

3.ಮುಂಬೈ:1,749-1,755 ರೂ.

4.ಚೈನ್ನೈ:1,959- 1,965 ರೂ.

5.ಬೆಂಗಳೂರು:1,874-1,880 ರೂ.

ಗೃಹಬಳಕೆ LPG ದರದಲ್ಲಿ ಯಾವುದೇ ಬದಲಾವಣೆ ಇಲ್ಲ

ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದರೂ, ದೇಶೀಯ(ಗೃಹಬಳಕೆ) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿನ ಹೆಚ್ಚಳವು ರೆಸ್ಟೋರೆಂಟ್‌ಗಳಲ್ಲಿನ ಊಟದ ಮೇಲೆ ಪರಿಣಾಮ ಬೀರಬಹುದು.ಹೀಗಾಗಿ, ರೆಸ್ಟೋರೆಂಟ್‌ಗಳು ತಮ್ಮ ಆಹಾರದ ದರಗಳನ್ನು ಕೂಡ ಹೆಚ್ಚಿಸಬಹುದು.(ಏಜೆನ್ಸೀಸ್​)