ನ್ಯೂಸ್

ವಿವಾಹಿತ ಮಗಳ ಜತೆ ಪ್ರಿಯಕರ ಲವ್ವಿ-ಡವ್ವಿ: ಇಬ್ಬರನ್ನು ಕೊಂದ ತಂದೆ! | Murder

Murder: ವಿವಾಹಿತ ಮಗಳು ಮತ್ತು ಆಕೆಯ ಪ್ರಿಯಕರನನ್ನು ತಂದೆಯೇ ಕೊಲೆ ಮಾಡಿದ ಭಯಾನಕ ಘಟನೆ ಮಹಾರಾಷ್ಟ್ರದ ನಾಂದೇಡ್​​ ಜಿಲ್ಲೆಯ ಉಮ್ರಿ ತಾಲೂಕಿನಲ್ಲಿ ಮಂಗಳವಾರ(ಆ.26) ನಡೆದಿದೆ.

ಉಮ್ರಿ ತಾಲೂಕಿನ ಬೋರ್ಜುನ್ನಿ ಗ್ರಾಮದ ನಿವಾಸಿ ಸಂಜೀವಿನಿ ಮತ್ತು ಆಕೆಯ ಪ್ರಿಯಕರ ಲಖನ್ ಭಂಡಾರೆ ಮೃತರು. ಕೊಲೆ ಮಾಡಿದ ಬಳಿಕ ಆರೋಪಿ ಪೊಲೀಸ್​​ ಠಾಣೆಯಲ್ಲಿ ಶರಣಾಗಿದ್ದು, ನಾಂದೇಡ್​ ಜಿಲ್ಲೆಯಲ್ಲಿ ಈ ಘಟನೆ ಬೆಚ್ಚಿಬೀಳಿಸಿದೆ.

ಕೊಲೆಗೆ ಕಾರಣ ಏನು?

ಕಳೆದ ಒಂದು ವರ್ಷದ ಹಿಂದೆ ಗೊಲೆಂಗಾವ್​​ನ ಸುಧಾಕರ್​ ಕಮಲೆ ಎಂಬುವವರನ್ನು ಸಂಜೀವಿನಿ ಮದುವೆಯಾಗಿದ್ದಳು. ಮದುವೆಯನ್ನು ಆಕೆಯ ತಂದೆ ಬಹಳ ವಿಂಜೃಭಣೆಯಿಂದ ಮಾಡಿದ್ದನು. ಆದಾಗ್ಯೂ, ಆಕೆ ತನ್ನ ಊರಿನ ಯುವಕನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಿದ್ದಳು. ಮದುವೆಯಾದ ಬಳಿಕವೂ ಆ ಯುವಕನ ಜತೆ ಸಂಪರ್ಕ ಮುಂದುವರೆಸಿದ್ದಳು. ಈ ಇಬ್ಬರ ನಡುವೆ ಸಂಪರ್ಕದ ಬಗ್ಗೆ ಅನುಮಾನಗೊಂಡ ಅತ್ತೆ-ಮಾವ ಒಂದು ದಿನ ರೆಡ್​ಹ್ಯಾಂಡ್​​ ಆಗಿ ಆಕೆಯನ್ನು ಹಿಡಿದು ಆಕೆಯ ಸಂಬಂಧದ ಬಗ್ಗೆ ತಂದೆಗೆ ಹೇಳಿದ್ದರು.

ತಂದೆ ಸಂಜಿವಿನಿ ಮತ್ತು ಆಕೆ ಪ್ರಿಯಕರನ್ನು ಕರೆಯಿಸಿ ಮಾತುಕತೆ ಮಾತನಾಡುವುದಾಗಿ ಹೇಳಿ ಹಳ್ಳಿಯೊಂದಕ್ಕೆ ಕರೆದೊಯ್ಯದಿದ್ದಾರೆ. ಇಬ್ಬರನ್ನು ಬಾವಿ ಹತ್ತಿರ ಕರೆದೊಯ್ಯುದು, ಬೆದರಿಕೆ ಹಾಕಿ ಕೈ-ಕಾಲು ಕಟ್ಟಿ ಬಾವಿಗೆ ಎಸೆದಿದ್ದಾನೆ. ಇಬ್ಬರು ಮೃತಪಟ್ಟ ಬಳಿಕ ಠಾಣೆ ಬಂದು ಆರೋಪಿ ಶರಣಾಗಿದ್ದಾನೆ.(ಏಜೆನ್ಸೀಸ್​)