ನ್ಯೂಸ್

ಮರಕ್ಕೆ ಕೊರಳೊಡ್ಡಿದ ದುರಂತ ಅಂತ್ಯಕಂಡ ಪ್ರೇಮಿಗಳು: ವಿಜಯಪುರದಲ್ಲಿ ದುರ್ಘಟನೆ

ವಿಜಯಪುರ: ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬಸವನ ಬಾಗೇವಾಡಿ ತಾಲೂಕಿನ ಜೈನಾಪುರ ಗ್ರಾಮದ ಹೊರವಲಯದಲ್ಲಿ ಬುಧವಾರ ಸಂಭವಿಸಿದೆ.

ರಾಕೇಶ್ ಅಂಗಡಿ(23) ಹಾಗೂ ಸಾವಿತ್ರಿ ಅಂಬಲಿ(19) ಮೃತ ಪ್ರೇಮಿಗಳು. ಇವರಿಬ್ಬರೂ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರಿಂದ ವಿರೋಧ ಇತ್ತು ಎನ್ನಲಾಗಿದೆ. ಬೇಸತ್ತ ಪ್ರೇಮಿಗಳು, ಸಾವಲ್ಲೂ ಒಂದಾಗಿದ್ದಾರೆ. ಬಸವನಬಾಗೇವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.