ನ್ಯೂಸ್

ನಡು ರಸ್ತೆಯಲ್ಲೇ ಲವ್​​ ಬರ್ಡ್ಸ್​ ರೋಮ್ಯಾನ್ಸ್​; ಪೊಲೀಸರು ಮಾಡಿದ್ದೇನು?: ವಿಡಿಯೋ ಇಲ್ಲಿದೆ ನೋಡಿ | Romance

Romance: ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಜಾಗರೂಕತೆಯಿಂದ ವರ್ತಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ಇದೀಗ ಇಂಥದ್ದೊಂದು ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ಘಟಿಸಿದೆ.

ಹೌದು, ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಬೈಕರ್​ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಪೊಲೀಸರನ್ನು ಒತ್ತಾಯಿಸಿದ್ದಾರೆ. ನೊಯ್ಡಾ (ಸಂಚಾರ) ಉಪ ಪೊಲೀಸ್ ಆಯುಕ್ತ ಲಕನ್ ಸಿಂಗ್ ಯಾದವ್ ಮಾಧ್ಯಮಗಳಿಗೆ ಈ ವಿಡಿಯೋವನ್ನು ಗಮನಿಸಿದ ನಂತರ, ವಾಹನದ ಸಂಖ್ಯೆಯನ್ನು ಆಧರಿಸಿ ಬೈಕ್ ಅನ್ನು ಗುರುತಿಸಿ, ಮೋಟಾರು ವಾಹನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ 53,500 ರೂ.ಗಳ ದಂಡದ ಚಲನ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆ ಏನು..?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಐದು ಸೆಕೆಂಡುಗಳ ಈ ಕ್ಲಿಪ್‌ನಲ್ಲಿ, ಯುವಕನೊಬ್ಬ ಬೈಕ್ ಸವಾರಿ ಮಾಡುತ್ತಿದ್ದರೆ, ಯುವತಿಯೊಬ್ಬಳು ಪೆಟ್ರೋಲ್ ಟ್ಯಾಂಕ್ ಮೇಲೆ ಹಿಮ್ಮುಖ ಸ್ಥಾನದಲ್ಲಿ ಕುಳಿತು ಕಾಲುಗಳನ್ನು ಹಿಂದೆ ಇಟ್ಟುಕೊಂಡು ಬೈಕ್ ಚಲಾಯಿಸುತ್ತಿರುವುದು ಕಂಡುಬರುತ್ತಿದೆ. ಇಬ್ಬರೂ ಹೆಲ್ಮೆಟ್ ಇಲ್ಲದೆ ಜನನಿಬಿಡ ಎಕ್ಸ್‌ಪ್ರೆಸ್‌ವೇಯಲ್ಲಿ ಸವಾರಿ ಮಾಡುತ್ತಿದ್ದಾರೆ. ಇಡೀ ಘಟನೆ ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.(ಏಜೆನ್ಸೀಸ್​​)