PUBG ಗೇಮ್ ವೇಳೆ ವಿವಾಹಿತ ಮಹಿಳೆಗೆ ಯುವಕನೊಂದಿಗೆ ಪ್ರೀತಿ ಚಿಗುರಿದೆ. ಇದೀಗ ಅದೇ ಪ್ರೀತಿ ಮರವಾಗಿ ಬೆಳದಿದ್ದು, ನಮ್ಮ ದೂರ ಮಾಡಿದ್ರೆ 55 ತುಂಡುಗಳಾಗಿ ಕೊಲೆ ಮಾಡುವುದಾಗಿ ಗಂಡನಿಗೆ ಪತ್ನಿ ಬೆದರಿಕೆ ಹಾಕಿದ ಅಘಾತಕಾರಿ ಪ್ರಕರಣವೊಂದು ಉತ್ತರಪ್ರದೇಶದ ಮಹೋಬಾದಲ್ಲಿ ಬೆಳಕಿಗೆ ಬಂದಿದೆ.
ಅವರ ಪ್ರೇಮಕಥೆಯು ಸೀಮಾ ಹೈದರ್ ಮತ್ತು ಸಚಿನ್ ಮೀನಾ ಅವರ ಪ್ರೇಮಕಥೆಯಂತೆಯೇ ಇದೆ, ಆದರೆ, ಈ ಬಾರಿ ಯಾವುದೇ ಗಡಿಗಳನ್ನು ದಾಟಲಿಲ್ಲ. ಇಬ್ಬರೂ ಪ್ರೇಮಿಗಳು ಭಾರತದವರೇ ಆಗಿದ್ದಾರೆ. ಆದಾಗ್ಯೂ, ಆನ್‌ಲೈನ್ ಆಟ ಆಡುವಾಗ ತಾನು ಪ್ರೀತಿಸಿದ ಮಹಿಳೆಯನ್ನು ಭೇಟಿಯಾಗಲು ಆ ವ್ಯಕ್ತಿ ಸುಮಾರು 1,000 ಕಿ.ಮೀ. ಪ್ರಯಾಣಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಅಬ್ಬಕ್ಕ ಬಲಿದಾನ ಮಹಿಳೆಯರಿಗೆ ಸ್ಫೂರ್ತಿ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ದಾಸ್ ಬಣ್ಣನೆ
ಆ ವ್ಯಕ್ತಿ ಪಂಜಾಬ್‌ನ ಲುಧಿಯಾನದವನಾಗಿದ್ದು, ಅಲ್ಲಿಂದ ಉತ್ತರ ಪ್ರದೇಶದ ಮಹೋಬಾಗೆ ಮಹಿಳೆಯ ಅತ್ತೆ-ಮಾವನ ಮನೆಗೆ ಭೇಟಿ ನೀಡಿದ್ದ ಎಂಬ ವರದಿಗಳಿವೆ. ಪ್ರಿಯಕರನ ಅನಿರೀಕ್ಷಿತ ಭೇಟಿ ಆಕೆಯ ಪತಿ ಮತ್ತು ಆತನ ಕುಟುಂಬಕ್ಕೆ ಆಘಾತವನ್ನುಂಟುಮಾಡಿತು. ಆನ್‌ಲೈನ್ ಪ್ರಿಯಕರನೊಂದಿಗೆ ವಾಸಿಸಲು ತನ್ನ ಪತಿ ಮತ್ತು ಮಗುವನ್ನು ಬಿಟ್ಟು ಹೋಗಬೇಕೆಂದು ಮಹಿಳೆ ಒತ್ತಾಯಿಸಲು ಪ್ರಾರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆ ತನ್ನ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ. ಮೀರತ್ ಕೊಲೆ ಪ್ರಕರಣದಂತೆ, ತನ್ನ ಮತ್ತು ತನ್ನ ಪ್ರೇಮಿಯ ನಡುವೆ ಅವನು ಬಂದರೆ, ಅವನನ್ನು 55 ತುಕ್ಡೆ (ತುಂಡುಗಳಾಗಿ) ಕತ್ತರಿಸಿ ಡ್ರಮ್‌ನಲ್ಲಿ ಹಾಕುವುದಾಗಿ ಅವಳು ಹೇಳಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾಳೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ:ಅಬ್ಬಕ್ಕ ಬಲಿದಾನ ಮಹಿಳೆಯರಿಗೆ ಸ್ಫೂರ್ತಿ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ದಾಸ್ ಬಣ್ಣನೆ
ಆ ಮಹಿಳೆಯನ್ನು ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಆರಾಧನಾ ಎಂದು ಗುರುತಿಸಲಾಗಿದ್ದು, 2022ರಲ್ಲಿ ಮಹೋಬಾದ ಶೀಲು ಅವರನ್ನು ವಿವಾಹವಾದರು. ಅವರಿಗೆ ಒಂದೂವರೆ ವರ್ಷದ ಗಂಡು ಮಗುವೂ ಇದೆ. ಮದುವೆಯಾದ ಕೆಲವು ತಿಂಗಳ ನಂತರ ಆರಾಧನಾ PUBG ಗೆ ವ್ಯಸನಿಯಾದರು ಮತ್ತು ಆಟದಲ್ಲಿ ಶಿವಮ್ ಅವರನ್ನು ಭೇಟಿಯಾದರು. ಶಿವಮ್ ಪಂಜಾಬ್‌ನ ಲುಧಿಯಾನದವರಾಗಿದ್ದು, ಕಾಲಾನಂತರದಲ್ಲಿ ಅವರ ಗೇಮಿಂಗ್ ಸ್ನೇಹ ಪ್ರೀತಿಯಾಗಿ ಬದಲಾಯಿತು.
ಪೊಲೀಸರ ಕ್ರಮ
ಶಿವಮ್ ಆಕೆಯ ಮನೆಗೆ ಬಂದಾಗ ಗಂಡನ ಜತೆ ಜಗಳವಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)