ಯುವತಿಯನ್ನು ಕಂದಕಕ್ಕೆ ಕಂದಕಕ್ಕೆ ತಳ್ಳಿದ ಪ್ರಿಯತಮ 
ನ್ಯೂಸ್

ಮದುವೆ ನಿಶ್ಚಯವಾದ ಬಳಿಕ ಪ್ರೀತಿಗೆ ಬ್ರೇಕ್; ಗರ್ಲ್‌ಫ್ರೆಂಡ್‌ನ ಕಂದಕಕ್ಕೆ ತಳ್ಳಿದ ಪಾಗಲ್ ಪ್ರೇಮಿ! | Maharashtra girlfriend murder

ಮಹಾರಾಷ್ಟ್ರದಲ್ಲಿ ಮದುವೆ ನಿಶ್ಚಯವಾದ ಬಳಿಕ ಪ್ರೀತಿಯ ಸಂಬಂಧ ಮುಂದುವರಿಸಲು ನಿರಾಕರಿಸಿದ ಯುವತಿಯನ್ನು ಆಕೆಯ ಪ್ರಿಯತಮ ಕಂದಕಕ್ಕೆ ತಳ್ಳಿದ್ದಾನೆ ಎನ್ನಲಾಗಿದೆ. ಬಳಿಕ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಹೇಳಿಕೊಂಡಿದ್ದ ಆರೋಪಿ, ಕೊನೆಗೆ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.

Maharashtra Murder Case: ಪ್ರೀತಿಯನ್ನು ಮುಂದುವರಿಸಲು ಯುವತಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕನೊಬ್ಬ ಆಕೆಯನ್ನು ಆಳವಾದ ಕಂದಕಕ್ಕೆ ತಳ್ಳಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ. ಯುವತಿಗೆ ಬೇರೆ ಕಡೆ ಮದುವೆ ನಿಶ್ಚಯವಾಗಿದ್ದೇ ಇಬ್ಬರ ನಡುವಿನ ಜಗಳಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶ್ರೀಪಾದ್ ದಿನಕರ್ ವಾಡು (25), ತರುನ್ನುಮ್ ಬಶೀರ್ ನಾಯಕ್ (23)ಳನ್ನು ಕಣಿವೆಗೆ ತಳ್ಳಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಹೇಳಿಕೊಂಡಿದ್ದ ಆತ, ಬಳಿಕ ಭುದರ್‌ಗಢ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಮದುವೆ ನಿಶ್ಚಯವಾದ ಬಳಿಕ ಶುರುವಾದ ಕಿರಿಕ್​

ಶ್ರೀಪಾದ್ ಮತ್ತು ತರುನ್ನುಮ್ ಮಹಾರಾಷ್ಟ್ರದ ಗರ್ಗೋಟಿಯ ಅವಧೂತ್ ಕಾಲೋನಿಯಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದ ಇಬ್ಬರೂ ಪ್ರೀತಿಸುತ್ತಿದ್ದರು. ತರುನ್ನುಮ್ ಮಹಾಗಾಂವ್‌ನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಳು. ಈ ನಡುವೆ ತರುನ್ನುಮ್‌ಗೆ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಶ್ರೀಪಾದ್ ಜತೆಗಿನ ಸಂಬಂಧ ಮುಂದುವರಿಸಲು ಆಕೆ ನಿರಾಕರಿಸಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.

ಯುವತಿಯನ್ನು ಕಂದಕಕ್ಕೆ ತಳ್ಳಿದ ಪಾಗಲ್​ ಪ್ರೇಮಿ

ಶುಕ್ರವಾರ ಬೆಳಗ್ಗೆ 11ರ ಸುಮಾರಿಗೆ ಶ್ರೀಪಾದ್, ತರುನ್ನುಮ್‌ಳನ್ನು ನೈಕ್ವಾಡಿ ಬಳಿಯ ಆಳವಾದ ಕಂದಕದ ಬಳಿ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಅಲ್ಲಿ ಮದುವೆ ನಿಶ್ಚಯವಾಗಿರುವುದರಿಂದ ಇನ್ನು ಮುಂದೆ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಶ್ರೀಪಾದ್, ಆಕೆಯನ್ನು ಕಂದಕಕ್ಕೆ ತಳ್ಳಿದ್ದಾನೆ. ಈ ಘಟನೆಯಲ್ಲಿ ತರುನ್ನುಮ್ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ನಾಪತ್ತೆಯಾಗಿದ್ದಾಳೆ ಎಂದಿದ್ದ ಆರೋಪಿ

ಘಟನೆ ಬಳಿಕ ತರುನ್ನುಮ್ ನಾಪತ್ತೆಯಾಗಿದ್ದಾಳೆ ಎಂದು ಹೇಳಿಕೊಂಡಿದ್ದ ಶ್ರೀಪಾದ್, ಬಳಿಕ ಭುದರ್‌ಗಢ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವಿಚಾರಣೆ ವೇಳೆ ಯುವತಿಯನ್ನು ಕಂದಕಕ್ಕೆ ತಳ್ಳಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಟೀ ಕುಡಿಯುತ್ತಿದ್ದವನಿಗೆ ಕಾರು ಡಿಕ್ಕಿ, ಬೈಕ್ ಮಾಯ; ಪವಾಡಸದೃಶವಾಗಿ ಪಾರಾದ ವ್ಯಕ್ತಿ! | Tamil Nadu Accident

ಇತ್ತ ವಿಷಯ ತಿಳಿದ ತರುನ್ನುಮ್ ಕುಟುಂಬಸ್ಥರು ಗರ್ಗೋಟಿಯ ಜಿಲ್ಲಾ ಆಸ್ಪತ್ರೆಗೆ ಧಾವಿಸಿದ್ದಾರೆ. ಕುಟುಂಬಸ್ಥರು ಜಮಾಯಿಸಿದ್ದರಿಂದ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣದ ಬಗ್ಗೆ ಭುದರ್‌ಗಢ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)