ಟೀ ಕುಡಿಯುತ್ತಿದ್ದವನಿಗೆ ಕಾರು ಡಿಕ್ಕಿ, ಬೈಕ್ ಮಾಯ; ಪವಾಡಸದೃಶವಾಗಿ ಪಾರಾದ ವ್ಯಕ್ತಿ! | Tamil Nadu Accident

ತಮಿಳುನಾಡಿನಲ್ಲಿ ಬಳಿ ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದ ವ್ಯಕ್ತಿಗೆ ಏಕಾಏಕಿ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಕಾರಿನೊಂದಿಗೆ ಮುಂದಕ್ಕೆ ಎಳೆದೊಯ್ದಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ
Car hits man drinking tea
ಟೀ ಕುಡಿಯುತ್ತಿದ್ದವನಿಗೆ ಕಾರು ಡಿಕ್ಕಿ
Published on: 

Tamil Nadu Accident: ತಮಿಳುನಾಡಿನಲ್ಲಿ ಟೀ ಅಂಗಡಿ ಮುಂದೆ ಬೈಕ್ ಮೇಲೆ ಕುಳಿತು ಟೀ ಕುಡಿಯುತ್ತಿದ್ದ ವ್ಯಕ್ತಿಗೆ ಏಕಾಏಕಿ ಕಾರು ಡಿಕ್ಕಿ ಹೊಡೆದಿದೆ. ಕ್ಷಣಾರ್ಧದಲ್ಲೇ ಆತ ಕುಳಿತಿದ್ದ ಬೈಕ್ ಕಾರಿನೊಂದಿಗೆ ಮುಂದಕ್ಕೆ ಎಳೆಯಲ್ಪಟ್ಟಿದೆ. ಬೈಕ್‌ನಿಂದ ಕೆಳಗೆ ಬಿದ್ದ ವ್ಯಕ್ತಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಇದೀಗ ವೈರಲ್ ಆಗಿವೆ.

ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಸಾತಂಕುಳಂ ಬಳಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ವ್ಯಕ್ತಿಯೊಬ್ಬರು ರಸ್ತೆ ಬದಿಯ ಟೀ ಅಂಗಡಿ ಮುಂದೆ ಬೈಕ್ ಮೇಲೆ ಕುಳಿತು ಟೀ ಕುಡಿಯುತ್ತಿದ್ದರು. ಅಷ್ಟರಲ್ಲೇ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಕಾರಿನೊಂದಿಗೆ ಮುಂದಕ್ಕೆ ಎಳೆದೊಯ್ದಿದೆ.

ವ್ಯಕ್ತಿ ಕ್ಷಣಾರ್ಧದಲ್ಲಿ ನೆಲಕ್ಕೆ ಬಿದ್ದ ವ್ಯಕ್ತಿ

ಇದರಿಂದ ಬೈಕ್ ಮೇಲಿದ್ದ ವ್ಯಕ್ತಿ ಕ್ಷಣಾರ್ಧದಲ್ಲಿ ನೆಲಕ್ಕೆ ಬಿದ್ದಿದ್ದಾರೆ. ಇದ್ದಕ್ಕಿದ್ದಂತೆ ಬೈಕ್ ಮುಂದಕ್ಕೆ ಸರಿದಿದ್ದರಿಂದ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಅವರು ಕೆಳಗೆ ಉರುಳಿದ್ದರು. ಅದೃಷ್ಟವಶಾತ್, ವ್ಯಕ್ತಿಗೆ ಯಾವುದೇ ಗಾಯಗಳಾಗಿಲ್ಲ.

ಕೂದಲೆಳೆ ಅಂತರದಲ್ಲಿ ಪಾರು

ಕಾರು ಡಿಕ್ಕಿ ಹೊಡೆದ ರಭಸ ಕಂಡು ಸುತ್ತಮುತ್ತಲಿದ್ದವರು ಬೆಚ್ಚಿಬಿದ್ದಿದ್ದಾರೆ. ಆರಾಮವಾಗಿ ಟೀ ಕುಡಿಯುತ್ತಿದ್ದ ವ್ಯಕ್ತಿ ಕ್ಷಣಾರ್ಧದಲ್ಲಿ ಅಪಘಾತಕ್ಕೆ ಸಿಲುಕಿದ್ದಾರೆ. ಈ ಇಡೀ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ‘ಎಲ್ಲಿಯ ತುಂಗಭದ್ರೆ, ಎಲ್ಲಿಯ ಕಾವೇರಿ’: ದಸರಾ ಉದ್ಘಾಟಿಸಿದ ಗವಿಸಿದ್ದೇಶ್ವರ ಶ್ರೀಗಳಿಗೆ ಡಿಕೆಶಿ ಸಾಷ್ಟಾಂಗ | Mysuru Dasara

ಅಪಘಾತದ ತೀವ್ರತೆ ಗಮನಿಸಿದರೆ ವ್ಯಕ್ತಿಗೆ ಗಂಭೀರ ಗಾಯಗಳಾಗುವ ಸಾಧ್ಯತೆಯಿತ್ತು. ಆದರೆ ಅದೃಷ್ಟವಶಾತ್ ಅವರು ಗಾಯವಿಲ್ಲದೆ ಪಾರಾಗಿದ್ದಾರೆ. ಈ ಘಟನೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವಾಗ ಮತ್ತು ವಾಹನಗಳ ಸಮೀಪ ಇರುವಾಗ ಎಚ್ಚರಿಕೆ ವಹಿಸುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net