ಬೆಂಗಳೂರು: ‘ಲವ್ ಮಾಕ್ಟೇಲ್’ ಈ ವರ್ಷದ ಸೂಪರ್ ಹಿಟ್ ಸಿನಿಮಾ. ನಿಧಿಮಾ ಮತ್ತು ಆದಿ ಜೋಡಿ ಅಷ್ಟೇ ಮುದ್ದಾಗಿಯೇ ಕಾಣಿಸಿಕೊಂಡು ಕರುನಾಡಿಗರ ಜತೆಗೆ ಪಕ್ಕದ ಟಾಲಿವುಡ್ ಮಂದಿಗೂ ಇಷ್ಟವಾಗಿತ್ತು. ಇದೀಗ ಇದೇ ಚಿತ್ರ ಯೂಟ್ಯೂಬ್ನಲ್ಲಿ ದೊಡ್ಡ ಅಂಕಿಯೊಂದನ್ನು ಪಡೆದುಕೊಂಡಿದೆ. ಚಿತ್ರತಂಡದ ಮಟ್ಟಿಗೆ ಇದೊಂದು ಖುಷಿಯ ವಿಚಾರ.
ಹೌದು, ಚಿತ್ರದಲ್ಲಿ ಲವ್ ಯೂ ಚಿನ್ನ ಹಾಡು ಸೂಪರ್ ಹಿಟ್ ಆಗಿದೆ. ಅದ್ಯಾವ ಮಟ್ಟಿಗೆ ಅಂದರೆ ಈವರೆಗೂ ಆ ಹಾಡನ್ನೂ 10 ಮಿಲಿಯನ್ ಅಂದರೆ ಬರೋಬ್ಬರಿ ಒಂದು ಕೋಟಿ ಬಾರಿ ವೀಕ್ಷಣೆಗೊಳಪಟ್ಟಿದೆ. ಹಾಗಾಗಿ ಆ ಖುಷಿಯ ಕ್ಷಣವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಚಿತ್ರದ ನಾಯಕಿ ಮಿಲನಾ ನಾಗರಾಜ್, ಮೆಲೊಡಿ ಹಾಡನ್ನು ನೀಡಿದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ಡಾರ್ಲಿಂಗ್ ಕೃಷ್ಣ ಮತ್ತು ಕ್ಯಾಮರಾಮನ್ ಶ್ರೀಕ್ರೇಜಿಮೈಂಡ್ಸ್ಗೆ ಧನ್ಯವಾದ’ ಎಂದಿದ್ದಾರೆ.
ಇದನ್ನೂ ಓದಿ: ಹೇಳಿದ ದಿನದಂದೇ ಕೆಜಿಎಫ್ 2 ಬಿಡುಗಡೆ ಆಗುವುದಾ?
ಸದ್ಯ ಮಿಲನಾ ಮತ್ತು ಕೃಷ್ಣ ಲವ್ ಮಾಕ್ಟೇಲ್ ಸೀಕ್ವೆಲ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸ್ಕ್ರಿಪ್ಟಿಂಗ್ ಕೆಲಸ ಶುರುವಾಗಿದ್ದು, ಲಾಕ್ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದ್ದಾರೆ.