ನ್ಯೂಸ್

ಪ್ರೀತಿಗೆ ವಯಸ್ಸಿನ ಹಂಗಿಲ್ಲ ನೋಡಿ... 76 ವರ್ಷದ ವೃದ್ಧ, 47ರ ಮಹಿಳೆಯನ್ನು ಮದುವೆಯಾದ

ಒಡಿಶಾ: ಪ್ರೀತಿಗೆ ವಯಸ್ಸಿಲ್ಲ ಎನ್ನುವ ಮಾತಿದೆ. ಆ ಮಾತನ್ನು ಈ ನವ ದಂಪತಿ ನಿಜ ಮಾಡಿ ತೋರಿಸಿದ್ದಾರೆ. ಆಕೆಯ ವಯಸ್ಸು 47.. ಆತ 76. ಇಳಿವಯಸ್ಸಿನ ವೃದ್ಧ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದು, ಕೊನೆಗೂ ಮದುವೆಯಾಗಿ ಒಂದಾಗಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯ ಶಂಖಮುಂಡಿ ಮಂಡಲದ ಅಡ್ಡಾ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಮಚಂದ್ರ ಸಾಹು (76) ಎಂಬ ವೃದ್ಧನಿಗೆ ಹಲವು ವರ್ಷಗಳ ಹಿಂದೆ ವಿವಾಹವಾಗಿತ್ತು. ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಗೆ ಮದುವೆಯಾಗಿದೆ. ಇತ್ತ ರಾಮಚಂದ್ರನ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾಳೆ. ಸುಮಾರು 18 ವರ್ಷಗಳಿಂದ ಒಂಟಿ ಜೀವನ ಸಾಗಿಸುತ್ತಿದ್ದವನಿಗೆ ಕಳೆದ 8 ವರ್ಷಗಳ ಹಿಂದೆ 47 ವರ್ಷದ ಮಹಿಳೆ ಮೇಲೆ ಪ್ರೀತಿಯಾಗಿದೆ.

ರಾಮಚಂದ್ರ ಸಾಹು ಮಾತನಾಡಿ, " ಭಂಜ್ ನಗರ ಕುಳಾಗರ್​​ ಗ್ರಾಮದ ತ್ರಿನಾಥ್ ಸಾಹು ಅವರ ಪುತ್ರಿ ಸುರೇಖಾ (46) ಅವರನ್ನೊಮ್ಮೆ  ನೋಡಿದೆ. ಮರುಮದುವೆ ಆಗಲೇಬೇಕೆಂದು ನಿರ್ಧಾರ ಮಾಡಿದೇನು. ಇಬ್ಬರೂ ಫೋನ್‌ನಲ್ಲಿ ಮಾತನಾಡುತ್ತಾ ಕಾಲ ಕಳೆಯುತ್ತಾ ನಮ್ಮ ಸಂಬಂಧ ಇನ್ನಷ್ಟು ಗಟ್ಟಿ ಆಯಿತ್ತು. ನಾವು ಒಬ್ಬರನ್ನೊಬ್ಬರು ಔತಣದಲ್ಲಿ ಭೇಟಿಯಾಗಿ ಮದುವೆಯಾಗುವ ನಿರ್ಧಾರಕ್ಕೆ ಬಂದೆವು" ಎಂದು ಹೇಳಿದ್ದಾರೆ.

ಭಂಜನಗರ ನ್ಯಾಯಾಲಯದಲ್ಲಿ ಜುಲೈ 19 ರಂದು ರಾಮಚಂದ್ರ ಮತ್ತು ಸುರೇಖಾ ವಿವಾಹವಾಗಿದ್ದಾರೆ. ನಂತರ ದೇವಸ್ಥಾನದಲ್ಲಿ ವಿಧಿವಿಧಾನಗಳ ಪ್ರಕಾರ ಮತ್ತೆ ವಿವಾಹವಾಗಿದ್ದಾರೆ.