ಬ್ರೇಕ್ಅಪ್ ನೋವಲ್ಲಿ ಕಂಗೆಟ್ಟು ಹೋಗಿದ್ದೀರಾ? 
ನ್ಯೂಸ್

Love Breakup: ಹಳೆ ನೆನಪುಗಳು ಕಾಡ್ತಿದ್ಯಾ? ಬ್ರೇಕ್ಅಪ್ ನೋವಿನಿಂದ ಆರಾಮಾಗಿ ಹೊರಬರಲು ಇಲ್ಲಿದೆ ಸಿಂಪಲ್ ಮಂತ್ರ!

Relationship Advice: ಜೀವನದಲ್ಲಿ ನಾವು ಪ್ರೀತಿಸಿದ ಸಂಗಾತಿಯಿಂದ ದೂರಾಗುವುದು ನಿಜಕ್ಕೂ ಭಾರಿ ನೋವು ಕೊಡುವ, ಮನಸ್ಸನ್ನು ಒಡೆದು ಹಾಕುವ ಕಷ್ಟದ ಹಂತ. ‘ಅಯ್ಯೋ, ನನ್ನ ಕಥೆ ಮುಗೀತು’ ಅಂತ ಕುಗ್ಗಿ ಹೋಗ್ಬೇಡಿ ಕಣ್ರೀ, ಇದು ಜೀವನದ ಅಂತ್ಯವಲ್ಲ, ಹೊಸದೊಂದು ಆರಂಭ ಅಷ್ಟೇ.

ಹೌದು... ನಿಮ್ಮ ಭಾವನೆಗಳಿಗೆ ಬೆಲೆ ಕೊಟ್ಟು, ಸ್ವಲ್ಪ ಸ್ಮಾರ್ಟ್‌ ಆಗಿ ಯೋಚಿಸಿದ್ರೆ ಈ ನೋವಿನಿಂದ ಆರಾಮಾಗಿ ಹೊರಬರಬಹುದು. ಈ ಪರಿಸ್ಥಿತಿಯಿಂದ ಬೇಗ ಚೇತರಿಸಿಕೊಂಡು ನೆಮ್ಮದಿಯಾಗಿರಲು ಇಲ್ಲಿದೆ ಕೆಲವು ಸಿಂಪಲ್ ಟಿಪ್ಸ್.

1.ಯಾವುದೇ ಸಂಪರ್ಕ ಇಟ್ಟುಕೊಳ್ಳಬೇಡಿ

ಸಾಮಾಜಿಕ ಜಾಲತಾಣಗಳಿಂದ ದೂರವಿರಿ. ಪದೆ-ಪದೆ ಭಾವನಾತ್ಮಕ ರೀಲ್ಸ್​ ನೋಡಬೇಡಿ. ಅಲ್ಲದೇ ಅವರು ಈಗ ಏನ್ ಮಾಡ್ತಿದ್ದಾರೆ ಅಂತ ಪ್ರೊಫೈಲ್ ಚೆಕ್ ಮಾಡೋದನ್ನ ಇಂದೇ ನಿಲ್ಲಿಸಿ. ಬೇಕಿದ್ರೆ ಬ್ಲಾಕ್ ಮಾಡಿ. ಮೆಸೇಜ್ ಅಥವಾ ಕರೆ ಮಾಡಬೇಡಿ. ‘ನಾವು ಜಸ್ಟ್ ಸ್ನೇಹಿತರ ತರ ಇರೋಣ ಬಿಡಿ’ ಅಂತೆಲ್ಲಾ ಮತ್ತೆ ಮಾತಾಡೋಕೆ ಹೋದ್ರೆ ಗಾಯ ವಾಸಿಯಾಗೋ ಬದಲು ಉರಿಯುತ್ತೆ. ಕನಿಷ್ಠ ಕೆಲವು ತಿಂಗಳು ಸಂಪೂರ್ಣ ದೂರವಿರಿ. ನೆನಪುಗಳನ್ನು ಕಣ್ಣೆದುರು ಇಟ್ಟುಕೊಳ್ಳಬೇಡಿ. ಅವರು ಕೊಟ್ಟ ಉಡುಗೊರೆಗಳು, ಫೋಟೋಗಳನ್ನು ಕಣ್ಣಿಗೆ ಬೀಳದ ಹಾಗೆ ಎತ್ತಿಡಿ.

ಯಾತನೆಯಿಂದ ಬೇಗ ಮೂವ್‌ಆನ್ ಆಗಬಹುದು

2.ಅಳೋದಿದ್ರೆ ಅತ್ತು ಹಗುರಾಗಿ

ನೋವು, ಕೋಪ ಬರೋದು ತುಂಬಾನೇ ಸಹಜ. ಅದನ್ನ ಹೊಟ್ಟೆಯಲ್ಲೇ ಇಟ್ಟುಕೊಂಡು ಕೊರಗಬೇಡಿ. ಯಾರೂ ಇಲ್ಲ ಅಂದ್ರೆ ಒಂಟಿಯಾಗಿ ಧೈರ್ಯವಾಗಿ ಅತ್ತು ಬಿಡಿ. ಮನಸ್ಸಿನಲ್ಲಿ ಇರೋದನ್ನೆಲ್ಲ ಒಂದು ಡೈರಿಯಲ್ಲಿ ಬರೆದಿಟ್ಟರೆ ಮನಸ್ಸು ಹಗುರಾಗುತ್ತೆ.

3.ಸದಾ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿಯಾಗಿರಿ

ಖಾಲಿ ಮೈಂಡ್ ದೆವ್ವದ ಮನೆ ಅಲ್ವಾ? ಹಾಗಾಗಿ ನಿಮಗೆ ಇಷ್ಟವಾದ ಸಂಗೀತ ಕೇಳುವುದು, ಅಡುಗೆ ಮಾಡುವುದು ಅಥವಾ ಗಿಡಗಳಿಗೆ ನೀರು ಹಾಕುವುದರಲ್ಲಿ ಟೈಮ್ ಸ್ಪೆಂಡ್ ಮಾಡಿ. ಆಫೀಸ್ ಕೆಲಸ ಅಥವಾ ಓದಿನ ಕಡೆ ಹೆಚ್ಚು ಗಮನ ಕೊಡಿ.

4.ಒಂಟಿಯಾಗಿರಬೇಡಿ, ಆಪ್ತರ ಹತ್ರ ಮಾತಾಡಿ

ರೂಮ್ ಲಾಕ್ ಮಾಡ್ಕೊಂಡು ಮೂಲೆಯಲ್ಲಿ ಕೂತುಕೊಳ್ಳಬೇಡಿ. ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಬೆಸ್ಟ್ ಫ್ರೆಂಡ್ಸ್ ಅಥವಾ ಮನೆಯವರ ಜತೆ ಟೈಮ್ ಪಾಸ್ ಮಾಡಿ. ಹೊಟ್ಟೆಯಲ್ಲಿರೋ ಗೋಳನ್ನೆಲ್ಲಾ ಅವರ ಹತ್ರ ಹಂಚಿಕೊಂಡ್ರೆ ಅರ್ಧ ನೋವು ಮಾಯವಾಗುತ್ತೆ.

ಹಳೆ ನೆನಪುಗಳಲ್ಲೇ ತೇಲಾಡ್ಬೇಡಿ

5.ಊಟ, ನಿದ್ದೆ ಮರೀಬೇಡಿ

ಬೇಸರವಿದೆ ಅಂತ ಊಟ ಮಾಡಲ್ವಾ? ಆ ತರ ಎಲ್ಲಾ ಮಾಡ್ಬೇಡಿ ಕಣ್ರೀ. ಟೈಮ್‌ಗೆ ಸರಿಯಾಗಿ ಒಳ್ಳೆ ಊಟ ಮಾಡಿ, ಚೆನ್ನಾಗಿ ನಿದ್ದೆ ಮಾಡಿ. ಪ್ರತಿದಿನ ಬೆಳಗ್ಗೆ ಒಂದು ಅರ್ಧ ಗಂಟೆ ವಾಕಿಂಗ್, ಯೋಗ ಮಾಡಿದ್ರೆ ಮೈಂಡ್ ಕೂಲ್ ಆಗಿರುತ್ತೆ.

ಇದನ್ನೂ ಓದಿ: NASA Asteroid Bennu: 450 ಕೋಟಿ ವರ್ಷಗಳ ಹಳೆಯ ರಹಸ್ಯ ಬಿಚ್ಚಿಟ್ಟ ಬೆನ್ನು ಕ್ಷುದ್ರಗ್ರಹ! ಸೌರಮಂಡಲದ ಸೃಷ್ಟಿಗೆ 'ಗುರು' ಕಾರಣವೇ?

6.ವಾಸ್ತವವನ್ನು ಒಪ್ಪಿಕೊಳ್ಳಿ

‘ಅವರು ಇಲ್ಲಾಂದ್ರೆ ನನ್ನ ಬ್ರಹ್ಮಾಂಡವೇ ಮುಳುಗಿಹೋಯ್ತು’ ಅಂತ ಹಳೆ ನೆನಪುಗಳಲ್ಲೇ ತೇಲಾಡ್ಬೇಡಿ. ಆ ಸಂಬಂಧ ಮುರಿದುಬೀಳಲು ಏನೆಲ್ಲಾ ಕಾರಣಗಳಿದ್ವೋ, ಆ ಕಹಿ ಸತ್ಯಗಳನ್ನು ಅರ್ಥ ಮಾಡ್ಕೊಳ್ಳಿ. ‘ನಮ್ ಲೈಫ್‌ಗೆ ಇಷ್ಟೇ ಬರೆದಿತ್ತು, ಮುಂದಕ್ಕೆ ಒಳ್ಳೇದೇ ಆಗುತ್ತೆ’ ಅಂತ ನಿಮ್ಮ ಮೇಲೆ ನೀವೇ ನಂಬಿಕೆ ಇಡಿ. ಭವಿಷ್ಯದ ಗುರಿಯ ಕಡೆ ಗಮನ ಕೊಡಿ, ನಿಮ್ಮ ಜವಾಬ್ದಾರಿಗಳನ್ನು ನೆನಪಿಸಿಕೊಳ್ಳಿ. ಮುಂದೆ ಎಲ್ಲವೂ ಸರಿ ಆಗುತ್ತೆ ಬಿಡಿ.