ನ್ಯೂಸ್

50 ರ ಪ್ರಾಯದಲ್ಲೂ 30 ರ ಹಾಗೆ ಕಾಣಬೇಕೆ...? ಈ ಅಭ್ಯಾಸಗಳನ್ನು ರೂಡಿಸಿಕೊಳ್ಳಿ Glowing skin

Glowing skin:ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಅವರ ಮುಖವು ಯೌವನದಿಂದ ಕೂಡಿರಬೇಕೆಂದು ಬಯಸುತ್ತಾರೆ. ಹಾಗೆಯೇ ಅನೇಕ ರೀತಿಯ ದುಬಾರಿ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಅಥವಾ ಚಿಕಿತ್ಸೆ ಕೊಡಿಸಿಕೊಳ್ಳುತ್ತಾರೆ. ಈ ಎಲ್ಲಾ ಪ್ರಯತ್ನಗಳನ್ನು ಮಾಡಿದರು ಯಾವುದೇ ಫಲಿತಾಂಶ ದೊರಲಿಲ್ಲವೇ? ಹಾಗಿದ್ದರೆ ಈ ರೀತಿಯ ಅಭ್ಯಾಸಗಳನ್ನು ಪಾಲಿಸಿಕೊಳ್ಳಿ. ಇದು 50 ರ ಹದೆಯರಿಸದ್ದರೂ 30 ರ ರೀತಿಯಲ್ಲಿ ಕಾಣುವಂತೆ ಮಾಡುತ್ತದೆ..

1. ಬೆಳಿಗ್ಗೆ ಎದ್ದ ತಕ್ಷಣ ನಿಂಬೆ ಬಿಸಿ ನೀರು ಕುಡಿಯಿರಿ

ನಿಂಬೆ ನೀರು ನೈಸರ್ಗಿಕ ನಿರ್ವಿಷ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನಿಂಬೆಯೊಂದಿಗೆ ಬೆಚ್ಚಗಿನ ನೀರಿನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯವಾಗುತ್ತದೆ. ಹಾಗೆಯೇ ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿರುವ ವಿಟಮಿನ್​ ಸಿ ಚರ್ಮವನ್ನು ಕಾಂತಿಯಿಂದ ಹೊಳೆಯುವಂತೆ ಮಾಡುತ್ತದೆ. ಹಾಗೂ ಚರ್ಮದಲ್ಲಾಗುವ ಸುಕ್ಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.

2. ಆರೋಗ್ಯಕರ ಕೂದಲು

ಕೂದಲು ವ್ಯಕ್ತಿಗಳ ಅಂದವನ್ನು ಹೆಚ್ಚಿಸುತ್ತದೆ. ಆದರಿಂದ ಬಾದಾಮಿ, ತೆಂಗಿನ ಕಾಯಿ ಮತ್ತು ಸಾಸಿವೆ ಎಣ್ಣೆಯನ್ನು ವಾರಕ್ಕೆ 2 ಬಾರಿ ತಲೆಗೆ ಹಚ್ಚುವುದರಿಂದ ನಿಮ್ಮ ಕೂದಲು ಉದುರುವುದು, ಬಿಳಿ ಬಣ್ಣಕ್ಕೆ ತಿರುಗುವುದನ್ನು ಕಡಿಮೆ ಮಾಡಿ, ನಿಮ್ಮ ನೆತ್ತಿಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

3. ಸೂಪರ್‌ಫುಡ್ಸ್

ನಮ್ಮ ಅಡುಗೆಮನೆಗಳಲ್ಲಿ ನೈಸರ್ಗಿಕ ವಯಸ್ಸಾದ ವಿರೋಧಿ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುವ ಅನೇಕ ಆಹಾರಗಳಿವೆ. ಅದರಲ್ಲಿ ಅರಿಶಿಣ ಉತ್ಕರ್ಷಣ ಗುಣಗಳನ್ನು ಹೊಂದಿರುವುದರಿಂದ ಇದು ಕಾಂತಿಯುತ ಚರ್ಮವನ್ನು ಬಲಪಡಿಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹೆಚ್ಚುವರಿಯಾಗಿ, ಬಾದಾಮಿ ಮತ್ತು ಕೂದಲನ್ನು ಬಲಪಡಿಸುತ್ತದೆ.

4. ದೈಹಿಕ ವ್ಯಾಯಾಮ

ಯೋಗ ಮತ್ತು ಲಘು ವ್ಯಾಯಾಮವು ದೇಹವನ್ನು ಫಿಟ್​​ ಆಗಿಡಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆ ಮತ್ತು ಚರ್ಮದ ಆರೋಗ್ಯ ಒಳ್ಳೆಯದು. ಪ್ರತಿದಿನ 30 ನಿಮಿಷ ದೈಹಿಕ ವ್ಯಾಯಾಮ, ನಡಿಗೆ, ಯೋಗ ಲಘು ಸ್ಟ್ರೇಚಿಂಗ್​ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ದೇಹದ ಒತ್ತಡವನ್ನು ಕಡಿಮೆ ಮಾಡುವುದರಿಂದ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ.

5. ಚೆನ್ನಾಗಿ ನಿದ್ದೆ ಮಾಡಿ

ಯಾವುದೇ ವ್ಯಕ್ತಿಯು ಯೌವನದಿಂದ ಇರಬೇಕು ಎಂದು ಬಯಸಿದರೆ ಆತನು ಸುಮಾರು 7-8 ಗಂಟೆಗಳ ಕಾಲ ನಿದ್ರೆಯನ್ನು ಮಾಡಬೇಕು. ಇದು ಚರ್ಮವನ್ನು ಸುಕ್ಕುಗಟ್ಟದೆ ಹಾಗೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಮಲಗುವಕ್ಕಿಂತ ಮುಂಚೆ ಹಾಲಿಗೆ ಅರಿಶಿಣ ಬೆರೆಸಿ ಕುಡಿಯುವುದರಿಂದ ಯೌವನವನ್ನು ಕಾಪಾಡಿಕೊಳ್ಳಬಹುದು. ಹಾಗೆಯೇ ಮಲಗುವ ಕೋಣೆಯಲ್ಲಿ ಮೊಬೈಲ್​ನ್ನು ದೂರ ಇರಿಸಿ..

6. ಪ್ರತಿನಿತ್ಯ ನಗುವುದನ್ನು ಮರೆಯಬೇಡಿ

ನಗು ಎಂಬುದು ಒಂದು ರೀತಿಯ ಚಿಕಿತ್ಸೆ ಇದ್ದ ಹಾಗೆ. ಇದು ಮೇಕಪ್​ಗಿಂತ ಹೆಚ್ಚು ಸುಂದರವಾಗಿರುತ್ತದೆ. ಪ್ರತಿದಿನ ವ್ಯಕ್ತಿಯು ನಗುವುದರಿಂದ ಒತ್ತಡವನ್ನು ಕಡಿಮೆ ಮಾಡಿ ಮನಸ್ಥಿತಿಯ ಸುಧಾರಿಸುತ್ತದೆ. ಅಂದಹಾಗೆ ಯಾವ ವ್ಯಕ್ತಿ ಹೆಚ್ಚಾಗಿ ನಗುತ್ತಾನೋ ಅವನು ಸುಂದರವಾದ ಚರ್ಮವನ್ನು ಹೊಂದುತ್ತಾನೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ