ನ್ಯೂಸ್

ಜಗತ್ತಿನಲ್ಲಿ ಮೊದಲ ಬಾರಿಗೆ ಸಿಗರೇಟ್ ತಯಾರಿಸಿದ್ದು ಈತನೇ ನೋಡಿ! ಕಂಡುಹಿಡಿದ ಕಾರಣ ಗೊತ್ತೆ? | Cigarette

cigarette: ಧೂಮಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರ ಎಂದರೆ ದಿನನಿತ್ಯ ಜಗತ್ತಿನಲ್ಲಿ ಮೃತಪಡುತ್ತಿರುವವರಲ್ಲಿ ಕನಿಷ್ಠ 10 ಮಂದಿಯಾದರೂ ಸಿಗರೇಟ್ ಸೇದುವ ಪರಿಣಾಮ ಎಂದು ವೈದ್ಯರು ಹೇಳುತ್ತಾರೆ. ದಿನಂಪ್ರತಿ ನಿಮ್ಮ ಸುತ್ತಮುತ್ತಲೇ 2-3 ಪ್ಯಾಕ್​​ ಸಿಗರೇಟ್​ ಸೇದುವವರಿದ್ದಾರೆ. ಇನ್ನು ಕೆಲವರು ಅದಕ್ಕೆ ದಾಸರಾಗಿರುತ್ತಾರೆ.ಹೀಗಾಗಿ, ಪ್ರತಿ ವರ್ಷ ಮಾ.12ರಂದು ಧೂಮಪಾನ ರಹಿತ ದಿನ ಎಂದು ಆಚರಿಸಲಾಗುತ್ತದೆ. ಧೂಮಪಾನದ ದುಷ್ಪರಿಣಾಮಗಳನ್ನು ಎತ್ತಿ ತೋರಿಸಲು ಮತ್ತು ಜನರು ಅದನ್ನು ತ್ಯಜಿಸಲು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ.​​​

1920ರ ದಶಕದಲ್ಲಿ, ವೈದ್ಯರ ವರದಿಗಳಲ್ಲಿ ಸಿಗರೇಟ್​ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಕಂಡುಬಂದಿತು. ಸಂಶೋಧಕರ ಪ್ರಕಾರ, ಈ ದಿನವನ್ನು ಆಚರಿಸುವುದು ಪರಿಣಾಮಕಾರಿ ಎಂದು ಸಾಬೀತಾಗಿದೆ ಮತ್ತು 10 ರಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಇದನ್ನು ತ್ಯಜಿಸುವುದನ್ನು ಗಮನಿಸಲಾಗಿದೆ. ಆದರೆ ಸಿಗರೇಟ್ ತುಂಬಾ ಅಪಾಯಕಾರಿ ಮತ್ತು ಮಾರಕವಾಗಿದೆ. ಹೀಗಾಗಿ, ಅದನ್ನು ಏಕೆ ಮತ್ತು ಯಾರು ಕಂಡುಹಿಡಿದರು? ಎಂಬುದು ತಿಳಿಯೋಣ..

ಸಿಗರೇಟ್​ ತಯಾರಿಸಿದವರು ಯಾರು..?

ಪ್ರತಿದಿನ 2ರಿಂದ 3 ಪ್ಯಾಕ್​​ ಸಿಗರೇಟ್​ ಸೇದುವವರಿದ್ದಾರೆ. ಅದೇ ರೀತಿ ಕಳೆದ ಕೆಲ ವರ್ಷಗಳಿಂದ ಧೂಮಪಾನಿಗಳ ಸಂಖ್ಯೆ ಕೂಡ ಅಧಿಕವಾಗಿದೆ. ಆದರೆ, ಸಿಗರೇಟ್ ತಯಾರಿಸಿದವರು ಯಾರು ಎಂದರೆ 'ತಂಬಾಕು ಇನ್​ ಹಿಸ್ಟರಿ' ಪುಸ್ತಕದ ಮಾಹಿತಿ ಪ್ರಕಾರ, ಅಮೆರಿಕದ ಡ್ಯೂಕ್ ಜೇಮ್ಸ್ ಬುಕಾನನ್ ಅವರನ್ನು ಸಿಗರೇಟಿನ ಪಿತಾಮಹ ಎಂದು ಪರಿಗಣಿಸಲಾಗಿದೆ.

ಡ್ಯೂಕ್ ಜೇಮ್ಸ್ ಬುಕಾನನ್ ಸಿಗರೇಟ್​ಗಳ ಪ್ರಸ್ತುತ ರೂಪಾಂತರಕ್ಕೆ ಕಾರಣನಾಗಿದ್ದಾನೆ.​ ಸಿಗರೇಟ್​ ವಿತರಿಸುವಲ್ಲಿ(ಮಾರ್ಕೆಂಟಿಗ್​) ಜೇಮ್ಸ್​ ಪ್ರಮುಖ ಪಾತ್ರವಹಿಸಿದ್ದರಿಂದ ಅಂದು ವಿದೇಶಗಳಲ್ಲಿ ಸಿಗರೇಟ್ ವಿಪರೀತವಾಗಿ ಬೇಡಿಕೆ ಬಂದಿತು. ಅಲ್ಲದೆ, ಇದನ್ನು ಮೊದಲು ಶ್ರೀಮಂತ ವ್ಯಕ್ತಿಗಳು ಸೇರಿದಂತೆ ಬ್ಯುಸಿನೆಸ್ಸ್​ಮ್ಯಾನ್​ ಸೇದುವುದರಿಂದ ತುಂಬಾ ಹೆಸರುವಾಸಿಯಾಗಿತು. ಬಳಿಕ ನಿಧಾನವಾಗಿ ಜಗತ್ತಿನ ವಿವಿಧ​ ಮಾರುಕಟ್ಟೆಗಳಲ್ಲಿ ಜನಪ್ರಿಯಗಳಿಸಿತು.

ಬಳಿಕ ಉತ್ತರ ಕೆರೊಲಿನಾದ ಡರ್ಹಾಮ್ ನಗರದ ಕೆಲವರು ಡ್ಯೂಕ್ ಡರ್ಹಾಮ್ ಹೆಸರಿನ ಸಿಗರೇಟ್‌ಗಳನ್ನು ತಯಾರಿಸುತ್ತಿದ್ದರು ಎಂದು 'ತಂಬಾಕು ಇನ್​ ಹಿಸ್ಟರಿ' ಪುಸ್ತಕದಲ್ಲಿ ಲೇಖಕರು ವಿವರಿಸಿದ್ದಾರೆ. ಅಂದು ಸಿಗರೇಟ್​ ತಯಾರಿದ್ದು ಕೇವಲ ಮನರಂಜನೆಗೊಸ್ಕರ ಅಂತೆ. ಆದರೆ, ಇಂದು ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಗೆ ಮಾರಕವಾಗಿದೆ. (ಏಜೆನ್ಸೀಸ್​)