ನವದೆಹಲಿ: ಮೆಟ್ರೋಪಾಲಿಟನ್ ಸಿಟಿಗಳಲ್ಲಿ ವಾಸಿಸುವವರಿಗೆ ಪ್ರತಿನಿತ್ಯ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಡಾಡುವುದು ಎಷ್ಟು ಕಷ್ಟವಿರುತ್ತದೆ ಎಂಬುದು ತಿಳಿದಿರುತ್ತದೆ. ಸರ್ಕಾರಗಳು ಜನರ ಓಡಾಟವನ್ನು ಸುಲಭವಾಗಿಸಲು ಮೆಟ್ರೋ, ಡೆಮು ರೈಲು ಸೇರಿದಂತೆ ಅನೇಕ ರೀತಿಯ ಸಾರಿಗೆ ವ್ಯವಸ್ಥೆ ಮಾಡಿದರು ಸಹ ಪ್ರತಿನಿತ್ಯ ಜನರು ಟ್ರಾಫಿಕ್ ಸಮಸ್ಯೆಯಿಂದಾಗಿ ಹೈರಾಣಾಗಿ ಹೋಗಿರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೆಲಸದ ನಿಮಿತ ಪ್ರತಿನಿತ್ಯ 320 ಕಿ.ಮೀ ಪ್ರಯಾಣಿಸುತ್ತಾನೆ ಎಂದರೆ ನೀವು ನಂಬುತ್ತೀರಾ. ಹೌದು ವಿಚಿತ್ರ ಎನಿಸಿದರೂ ಇದು ನಿಜ.
ಪೂರ್ವ ಚೀನಾದ ಶಾಂಡಾಂಗ್ ಪ್ರಾಂತ್ಯದ ವೈಫಾಂಗ್ ನಗರದಲ್ಲಿ ವಾಸವಿರುವ ಲಿನ್ ಶು (31) ಕೆಲಸಕ್ಕಾಗಿ ಙ್ರತಿನಿತ್ಯ ಕೆಲಸಕ್ಕಾಗಿ 320 ಕಿಲೋಮೀಟರ್ ಪ್ರಯಾಣಿಸುತ್ತಿದ್ದು, ಪ್ರತಿನಿತ್ಯ ತಾನು ವಾಸಿಸುವ ಸ್ಥಳದಿಂದ 320 ಕಿಲೋಮೀಟರ್ ದೂರದಲ್ಲಿರುವ ಶಾಂಡಾಂಗ್ ಪ್ರಾಂತ್ಯದ ಚೆಂಗ್ಡುಗೆ ಪ್ರಯಾಣಿಸುತ್ತಾರೆ. ಈ ಬಗ್ಗೆ ಕೇಳಿದಾಗ ಆತ ನೀಡಿರುವ ಉತ್ತರ ಎಲ್ಲರ ಗಮನ ಸೆಳೆಯುತ್ತಿದ್ದು, ಸಖತ್ ವೈರಲ್ ಆಗಿದೆ.
ಪ್ರತಿನಿತ್ಯ ಬೆಳಗ್ಗೆ 5:00ಕ್ಕೆ ಏಳುವ ಲಿನ್ ಶು, ರಡಿಯಾಗಿ 5:20ಕ್ಕೆ ಮನೆಯಿಂದ ಹೊರಡುತ್ತಾರೆ. ಇ ಬೈಕ್ ಮೂಲಕ ರೈಲ್ವೆ ನಿಲ್ದಾಣ ತಲುಪುತ್ತಾರೆ. ಬೆಳಗ್ಗೆ 6.15ಕ್ಕೆ ರೈಲನ್ನು ಹಿಡಿಯುತ್ತಾರೆ ನಂತರ 7.46ಕ್ಕೆ ಶಾಂಡಾಂಗ್ ಪ್ರಾಂತ್ಯದ ಚೆಂಗ್ಡುಗೆ ಪ್ರಯಾಣಿಸುತ್ತಾರೆ. ರೈಲ್ವೆ ನಿಲ್ದಾಣದಿಂದ ಕೆಲ ದೂರ ಪ್ರಯಾಣಿಸಿದ ಬಳಿಕ ಅವರ ಕಚೇರಿ ತಲುಪಲಿದ್ದು, 9 ಗಂಟೆಗೆ ಕೆಲಸವನ್ನು ಆರಂಭಿಸಲಿದ್ದಾರೆ. ಒಂದು ಸುತ್ತಿನ ಪ್ರಯಾಣವು 160 ಕಿ.ಮೀದ್ದಾಗಿದೆ. ಮನೆಗೆ ಹಿಂದಿರುಗುವಾಗಲೂ ಅಷ್ಟೇ ಪ್ರಯಾಣಿಸಬೇಕು. ಸುಮಾರು 3 ಗಂಟೆಗಳಲ್ಲಿ 160 ಕಿ.ಮೀ ಪ್ರಯಾಣ ಮುಗಿಸಿ ಮನೆಗೆ ಬರುತ್ತಾರೆ.
ಆದರೆ ಅವರೇಕೆ ಅಲ್ಲಿಂದಲೇ ಓಡಾಡುತ್ತಾರೆ ಆಫೀಸ್ ಹತ್ತಿರ ಎಲ್ಲೂ ಮನೆ ಇರಲಿಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಇದಕ್ಕೆ ಉತ್ತರಿಸಿದ ಲಿನ್ ಶು ನಾನು 7 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಈ ವರ್ಷದ ಮೇನಲ್ಲಿ ಆಕೆಯನ್ನು ಮದುವೆಯಾದೆ. ಹೆಂಡತಿಗಾಗಿ ಸ್ವಂತ ಫ್ಲ್ಯಾಟ್ ಖರೀದಿಸಿದ್ದಾರೆ. ಈಗ ಆಕೆಯನ್ನು ಅಲ್ಲಿ ಒಬ್ಬಳನ್ನೇ ಬಿಟ್ಟು ತಾನು ಬೇರೆ ಊರಿನಲ್ಲಿ ವಾಸಿಸುವುದು ಸರಿ ಅನ್ನಿಸಲಿಲ್ಲ ಹಾಗಾಗಿ ಪ್ರತಿನಿತ್ಯ ಪ್ರಯಾಣಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಪ್ರತಿ ತಿಂಗಳು ನನ್ನ ಓಡಾಟಕ್ಕೆ 20 ಸಾವಿರ ರೂಪಾಯಿ ಖರ್ಚಾಗುತ್ತಿದೆ. ಕಚೇರಿ ಇರುವ ನಗರದಲ್ಲಿ ಸಿಂಗಲ್ ಬಿಎಚ್ಕೆ 20 ಸಾವಿರರೂ.ಗೆ ಲಭ್ಯವಾಗುತ್ತದೆ. ಈಗ ನನ್ನ ಪತ್ನಿ ಕೂಡ ನಾನು ಕೆಲಸ ಮಾಡುವ ನಗರದಲ್ಲೇ ಕಲಸಕ್ಕಾಗಿ ಹುಡುಕಾಡುತ್ತಿದ್ದು, ಆಕೆ ನನಗೆ ತುಂಬಾ ಸಪೋರ್ಟ್ ಮಾಡುತ್ತಾಳೆ. ಸಾರ್ವಜನಿಕ ಸಾರಿಗೆ ಉತ್ತಮವಾಗಿದ್ದು, ಹೆಚ್ಚಿನ ತೊಂದರೆಯಾಗುವುದಿಲ್ಲ ಎಂದು ಲಿಮ್ ಶು ಹೇಳಿದ್ದಾರೆ.