ನ್ಯೂಸ್

ಎಲ್​​ಒಸಿ ಬಳಿ ಭೂಕುಸಿತದಿಂದ ಸಂಭವಿಸಿದ ಲಘು ಸ್ಫೋಟದಲ್ಲಿ ಓರ್ವ ಸೈನಿಕನಿಗೆ ಗಾಯ

ರಾಜೌರಿ (ಜಮ್ಮು ಮತ್ತು ಕಾಶ್ಮೀರ) : ನೌಶೇರಾ ಸೆಕ್ಟರ್‌ನ ಕಲಾಲ್ ಪ್ರದೇಶದಲ್ಲಿ ಭೂಕುಸಿತದಿಂದ ಉಂಟಾದ ಲಘು ಸ್ಫೋಟದಲ್ಲಿ ಓರ್ವ ಸೈನಿಕ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಕಲಾಲ್‌ನ ನಿಯಂತ್ರಣ ರೇಖೆಯ (ಎಲ್‌ಒಸಿ) ಗುಂಟ ಸೇನಾ ತಂಡ ದೈನಂದಿನ ಕರ್ತವ್ಯದಲ್ಲಿದ್ದಾಗ ಲಘು ಸ್ಫೋಟ ಸಂಭವಿಸಿದ್ದು ಸೈನಿಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.