More

    ಒಳನುಸುಳಿದ ಪಾಕ್ ವ್ಯಕ್ತಿ ಬಂಧನ

    ಪಿರ್ ಪಂಜಾಲ್ : ಮೆಂಧರ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯ ಒಳನುಗ್ಗಿದ ಪಾಕಿಸ್ತಾನ ಆಡಳಿತದ ಕಾಶ್ಮೀರ (PaK) ಮೂಲದ ವ್ಯಕ್ತಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
    ಎಲ್‌ಒಸಿ ಬಳಿಯ ಪಂಜನಿ ನಲ್ಲಾ ಪ್ರದೇಶದ ಕೆಲವರು ದನಗಳನ್ನು ಮೇಯಿಸುತ್ತಿದ್ದಾಗ ವ್ಯಕ್ತಿಯೊಬ್ಬ ಅವರ ಬಳಿಗೆ ಬರುತ್ತಿರುವುದನ್ನು ನೋಡಿದರು ಎಂದು  ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಪಾತಕಿ ಅಬು ಸಲೇಂನ ಹಣವನ್ನು ದೆಹಲಿಯ ರಿಯಲ್​ ಎಸ್ಟೇಟ್​ನಲ್ಲಿ ಹೂಡಿಕೆ ಮಾಡಿದಾತನ ಬಂಧನ

    “ಆ ವ್ಯಕ್ತಿ ಪಾಕ್ ನಿವಾಸಿಯಾಗಿದ್ದಾನೆ ಎನ್ನಲಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಬಾಲಾಕೋಟ್ ಪೊಲೀಸ್ ಠಾಣೆಯ ತಂಡವೊಂದು ಸ್ಥಳಕ್ಕೆ ಆಗಮಿಸಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಆತನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿ ಹೇಳಿದರು.
    ಆ ವ್ಯಕ್ತಿ ಗಡಿ ನಿಯಂತ್ರಣ ರೇಖೆಯನ್ನು ಹೇಗೆ ದಾಟಿದನೆಂದು ತಿಳಿದುಕೊಳ್ಳಲು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಆತನ ಬಳಿ ಯಾವುದೇ ದಾಖಲೆ ಅಥವಾ ಯಾವುದೇ ವಸ್ತುಗಳಿಲ್ಲ ಅಧಿಕಾರಿ ಹೇಳಿದರು.

    ಇದನ್ನೂ ಓದಿ: ಪತ್ರಿಕೆ ಮಾಲೀಕನ ಬಂಧನ: ರಾಶಿ ರಾಶಿ ಮೂಳೆ, ಅಶ್ಲೀಲ ಫೋಟೋ, ಸಿ.ಡಿ ವಶಕ್ಕೆ

    ಈ ವ್ಯಕ್ತಿ ತನ್ನನ್ನು ಪಾಕ್‌ನ ಸೆಮತಿ ಗ್ರಾಮದ ನಿವಾಸಿ ಅಬ್ದುಲ್ ರೆಹಮಾನ್ ಎಂದು ಹೇಳಿಕೊಂಡಿದ್ದಾನೆ.
    ನಾವು ಆತನನ್ನು ವಶಕ್ಕೆ ತೆಗೆದುಕೊಂಡಿದ್ದು ತನಿಖೆ ಪ್ರಾರಂಭಿಸಿದ್ದೇವೆ ಎಂದು ಪೂಂಚ್ ನ ಹಿರಿಯ ಪೊಲೀಸ್ ಅಧೀಕ್ಷಕ ರಮೇಶ್ ಕೆ ಆಂಗ್ರಾಲ್ ಹೇಳಿದ್ದಾರೆ.

    ಸಹೋದರನಿಗೆ ಕರೊನಾ- ಸೌರವ್‌ ಗಂಗೂಲಿ ಹೋಮ್‌ ಕ್ವಾರಂಟೈನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts