ಶಿವಮೊಗ್ಗ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಗುರುವಾರವಾರದಿಂದ ಆರಂಭಗೊಂಡಿದೆ. ಈ ನಡುವೆ ಮಲೆನಾಡಿನಲ್ಲಿ ವಾಮಾಚಾರದ ಆತಂಕ ಶುರುವಾಗಿದೆ.
ಇಂದು ತಾಲೂಕಿನ ಮುದ್ದಿನಕೊಪ್ಪ ಭೋವಿ ಕಾಲನಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯ ಆಲದ ಮರವೊಂದರ ಬಳಿ ವಾಮಾಚಾರ ನಡೆಸಿ ಸ್ಥಳದಲ್ಲೇ ಜೀವಂತ ಕುರಿ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ.
ತಡರಾತ್ರಿ ವೇಳೆ ವಾಮಾಚಾರ ನಡೆಸಲಾಗಿದೆ. ವಾಮಾಚಾರ ನಡೆಸಿದ ಸ್ಥಳದಲ್ಲಿ ಮಡಕೆಗಳು, ಅನ್ನ, ಬಿದಿರಿನ ಮರ ಹಾಗೂ ಪುಟ್ಟಿಗಳು, ಮೊಟ್ಟೆ, ಬಟ್ಟೆಗಳು, ಅರಿಷಿಣ-ಕುಂಕುಮ, ಗೊಂಬೆ ಸೇರಿದಂತೆ ಮೊದಲಾದ ಪೂಜಾ ಸಾಮಗ್ರಿಗಳಿವೆ.
ಇದನ್ನೂ ಓದಿ: ಕೋಳಿಗಳಿಂದ H3N8 ವೈರಸ್ ಪತ್ತೆ; ಸೋಂಕಿನ ಲಕ್ಷಣಗಳೇನು..?
ವಿಧಾನಸಭಾ ಚುನಾವಣಾ ರಾಜಕಾರಣದ ಹಿನ್ನೆಲೆಯಲ್ಲಿ, ವಾಮಾಚಾರ ನಡೆಸಿರುವ ಅನುಮಾನಗಳಿವೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ವಾಮಾಚಾರದ ವಿಷಯವು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಸಿ ಬಿಸಿ ಚರ್ಚೆಗೆಡೆ ಮಾಡಿಕೊಟ್ಟಿದೆ. ವಾಮಾಚಾರ ನಡೆಸಿ, ಗ್ರಾಮಸ್ಥರಲ್ಲಿ ಭಯ ಸೃಷ್ಟಿಸುವ ಕಾರ್ಯ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.