ನ್ಯೂಸ್

ಭಾರತ, ಚೀನಾಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಲಿಂಡ್ಸೆ ಗ್ರಹಾಂ! Lindsey Graham

Lindsey Graham: ಯುಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧದ ನಡುವೆ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸದಿದ್ದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಚೀನಾ ಸೇರಿದಂತೆ ಮಾಸ್ಕೋದ ವ್ಯಾಪಾರ ಪಾಲುದಾರರ ಮೇಲೆ ಭಾರಿ ಸುಂಕ ವಿಧಿಸಲಿದೆ ಎಂದು ಯುಎಸ್ ಸೆನೆಟರ್ ಲಿಂಡ್ಸೆ ಗ್ರಹಾಂ ಎಚ್ಚರಿಸಿದ್ದಾರೆ.

"ಟ್ರಂಪ್ ಅವರು ರಷ್ಯಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ ಸುಂಕ ವಿಧಿಸಲಿದ್ದಾರೆ. ನಾನು ಚೀನಾ, ಭಾರತ ಮತ್ತು ಬ್ರೆಜಿಲ್‌ಗಳಿಗೆ ಹೇಳುವುದೇನೆಂದರೆ. ಈ ಯುದ್ಧ ಮುಂದುವರಿಯಲು ಕಾರಣ ನೀವು ಕಡಿಮೆ ಬೆಲೆಗೆ ರಷ್ಯಾದಿಂದ ತೈಲವನ್ನು ಖರೀದಿ ಮಾಡುತ್ತಿರುವುದು ಎಂದಿದ್ದಾರೆ. ನೀವು ರಷ್ಯಾ ಜೊತೆ ತೈಲ ಖರೀದಿಯನ್ನು ಮುಂದುವರೆಸಿದರೆ, ನಾವು ನಿಮ್ಮ ಆರ್ಥಿಕತೆಯನ್ನು ಪುಡಿ ಮಾಡುತ್ತೇವೆ" ಎಂದು ಗ್ರಹಾಂ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಪುಟಿನ್ ತನ್ನದಲ್ಲದ ದೇಶದ ಮೇಲೆ ಯುದ್ದ ಮಾಡಿ, ಅದನ್ನು ವಶಪಡಿಸಿಕೊಳ್ಳಲು ಬಯಸುತ್ತಿದ್ದಾರೆ. 90ರ ದಶಕದ ಮಧ್ಯಭಾಗದಲ್ಲಿ, ಯುಕ್ರೇನ್ 1,700 ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸಿತ್ತು. ಇದಕ್ಕೆ ಪ್ರತಿಯಾಗಿ ರಷ್ಯಾ ತನ್ನ ಸಾರ್ವಭೌಮತ್ವವನ್ನು ಗೌರವಿಸುತ್ತದೆ ಎಂಬ ಭರವಸೆಯಲ್ಲಿ ಉಕ್ರೇನ್​ ಇತ್ತು. ಅದರೆ, ಪುಟಿನ್ ಆ ಭರವಸೆಯನ್ನು ಮುರಿದಿದ್ದಾರೆ" ಎಂದು ಗ್ರಹಾಂ ಹೇಳಿದ್ದಾರೆ.

ರಷ್ಯಾದ ಕಚ್ಚಾ ತೈಲ ರಫ್ತಿನಲ್ಲಿ ಚೀನಾ, ಭಾರತ ಮತ್ತು ಬ್ರೆಜಿಲ್‌ಗೆ ದೇಶಗಳು ಶೇ.80 ರಷ್ಟು ಪಾಲುದಾರಿಕೆಯನ್ನು ಹೊಂದಿವೆ. ಇದು "ಪುಟಿನ್ ಅವರ ಯುದ್ಧ ದಹಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸುವ ದೇಶಗಳ ಮೇಲೆ ಶೇ.500 ರಷ್ಟು ಸುಂಕ ವಿಧಿಸುವ ಮಸೂದೆಯನ್ನು ಗ್ರಹಾಂ ಈ ಹಿಂದೆ ಪ್ರಸ್ತಾಪಿಸಿದ್ದರು.(ಏಜೆನ್ಸೀಸ್​)