ತಮಿಳುನಾಡು: ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರ 'ಧೋನಿ ಎಂಟರ್ಟೈನ್ಮೆಂಟ್ಸ್' ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡ ಚೊಚ್ಚಲ ಸಿನಿಮಾ 'ಲೆಟ್ಸ್ ಗೆಟ್ ಮ್ಯಾರೀಡ್' ಇದೀಗ ಒಟಿಟಿಗೆ ಪಾದಾರ್ಪಣೆ ಮಾಡಿದೆ.
ಕ್ರಿಕೆಟ್ ವೃತ್ತಿಯಲ್ಲಿ ಭಾರೀ ಖ್ಯಾತಿ ಗಳಿಸಿರುವ ಎಂ.ಎಸ್. ಧೋನಿ, ಧೋನಿ ನಿರ್ಮಾಣ ಸಂಸ್ಥೆಯನ್ನು ತೆರೆದ ಬೆನ್ನಲ್ಲೇ 'ಲೆಟ್ಸ್ ಗೆಟ್ ಮ್ಯಾರೀಡ್' ಎಂಬ ಚಲನಚಿತ್ರವನ್ನು ನಿರ್ಮಿಸಿದರು. ಈ ಸಿನಿಮಾ ಧೋನಿ ಎಂಟರ್ಟೈನ್ಮೆಂಟ್ಸ್ನ ಚೊಚ್ಚಲ ನಿರ್ಮಾಣದ ಚಿತ್ರವಾಗಿದ್ದು, ಜುಲೈ 28 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.
ಹರೀಶ್ ಕಲ್ಯಾಣ್-ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿದ ತಮಿಳು ಆವೃತ್ತಿಯ 'ಲೆಟ್ಸ್ ಗೆಟ್ ಮ್ಯಾರೀಡ್' ಇದೀಗ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಗೊಂಡಿದೆ. ತಮಿಳಿನಲ್ಲಿ ಲಭ್ಯವಿರುವ ಈ ಚಿತ್ರದ ತೆಲುಗಿನ ಸ್ಟ್ರೀಮಿಂಗ್ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ.
ಇದನ್ನೂ ಓದಿ: ರಕ್ತದಾನ ಮಾಡಿ ಜೀವ ಉಳಿಸಿ
ರಮೇಶ್ ತಮಿಳಮಣಿ ನಿರ್ದೇಶನದ ಈ ಚಿತ್ರದಲ್ಲಿ ನದಿಯಾ, ಯೋಗಿ ಬಾಬು, ಮಿರ್ಚಿ ವಿಜಯ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).