Pahalgam | ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್-ಎ-ತೈಬಾ (Let) ಭಯೋತ್ಪಾದಕ ತರಬೇತಿ ಕೇಂದ್ರ ಶಿಬಿರ ಇರುವ ಚಿತ್ರಗಳನ್ನು ಭಾರತೀಯ ಗುಪ್ತಚರ ಸಂಸ್ಥೆ ಪಡೆದುಕೊಂಡಿದೆ. Let ತರಬೇತಿ ಕೇಂದ್ರ ಸ್ಯಾಟ್ಲೈಡ್ ದೃಶ್ಯದಲ್ಲಿ ಸೆರೆಯಾಗಿದೆ. ಉಗ್ರರು ಪಾಕ್ನ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲಿ ಅಡಗಿ ಕುಳಿತ್ತಿದ್ದ ಕುರುಹು ಪತ್ತೆಯಾಗಿದೆ.
ಜಂಗಲ್ ಮಂಗಲ್ ಕ್ಯಾಂಪ್ ಎಂದು ಕರೆಯಲ್ಪಡುವ ಈ ತರಬೇತಿ ಕ್ಯಾಂಪ್ಅನ್ನು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮನ್ಸೆಹ್ರಾ ಜಿಲ್ಲೆಯ ಅತಾರ್ ಸಿಸಾ ಎಂಬ ಪಟ್ಟಣದಲ್ಲಿ ನಿರ್ಮಿಸಲಾಗಿದೆ. ಗುಪ್ತಚರ ಮೂಲಗಳ ಪ್ರಕಾರ, ಈ ಶಿಬಿರವು ಬಹಳ ಹಿಂದಿನಿಂದಲೂ ಎಲ್‌ಇಟಿ ಉಗ್ರಗಾಮಿಗಳಿಗೆ ಪ್ರಮುಖ ತರಬೇತಿ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಈ ಶಿಬಿರವು ಮಸೀದಿ, ಅತಿಥಿ ಸಭೆ, ಸಭಾಂಗಣಗಳು ಮತ್ತು ವಿದೇಶಿ ಭಯೋತ್ಪಾದಕರಿಗೆ ತರಬೇತಿ ಸಭಾಂಗಣವನ್ನು ಒಳಗೊಂಡಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಬಾಗ್ಲಿಹಾರ್ ಅಣೆಕಟ್ಟಿನ ನೀರನ್ನು ಕಡಿತಗೊಳಿಸಿದ ಭಾರತ| Baglihar river
(ಏಜೆನ್ಸೀಸ್)
ಲಷ್ಕರ್ ಕಮಾಂಡರ್‌ಗಳು ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನಡುವಿನ ಉನ್ನತ ಮಟ್ಟದ ಸಭೆಗಳು ಶಿಬಿರ ಸಂಕೀರ್ಣದೊಳಗಿನ ಫಾಗ್ಲಾ ಬಿಆರ್ ಸ್ಥಳದಲ್ಲಿ ಆಗಾಗ್ಗೆ ನಡೆಯುತ್ತವೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಈ ಶಿಬಿರವನ್ನು ದೊಡ್ಡದಾದ ತೆರೆದ ಮೈದಾನ, ಶಸ್ತ್ರಾಸ್ತ್ರ ತರಬೇತಿ ಮತ್ತು ದೈಹಿಕ ಕಸರತ್ತುಗಳಿಗೆ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ಶಿಬಿರವನ್ನು ಭಾರತೀಯ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳು ನಿರಂತರವಾಗಿ ಗಮನಿಸುತ್ತಿವೆ. ಅವರು ಹೇಳುವಂತೆ ಇದನ್ನು ಭಯೋತ್ಪಾದಕರನ್ನು ಭಾರತದ ಪ್ರದೇಶಕ್ಕೆ ನುಸುಳಲು ಸಿದ್ಧಪಡಿಸಲು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ.