ನ್ಯೂಸ್

ಚಿರತೆ ಚರ್ಮ, ಉಗುರು ವಶ! 7 ಮಂದಿ ಬಂಧನ

ಮೋಹನ್​ ಶೆಟ್ಟಿ

ಗುಜರಾತ್‌: ಚಿರತೆಯ ಚರ್ಮ ಮತ್ತು ಉಗುರುಗಳನ್ನು ಪತ್ತೆಹಚ್ಚಿದ ಬೆನ್ನಲ್ಲೇ ಏಳು ಜನರನ್ನು ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ವರದಿಯಾಗಿದೆ.

ಸತ್ತ ಚಿರತೆಯ ಚರ್ಮ ಮತ್ತು ಉಗುರುಗಳನ್ನು ಹೊರತೆಗೆದಿದ್ದಾರೆ ಎನ್ನಲಾಗಿದ್ದು, ಸ್ಥಳೀಯ ಅರಣ್ಯ ಇಲಾಖೆಯ ತಂಡಕ್ಕೆ ಮಾರಾಟ ಮಾಡಲು ಪ್ರಯತ್ನಿಸಿದ ವೇಳೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಶುಕ್ರವಾರ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ (ಡಬ್ಲ್ಯುಸಿಸಿಬಿ) ತಿಳಿಸಿದೆ. ಆರೋಪಿಗಳು ಡಮ್ಮಿ ಗಿರಾಕಿಗಳು ಎಂದು ಕಪ್ರಡಾ ವ್ಯಾಪ್ತಿಯ ಅರಣ್ಯ ಅಧಿಕಾರಿ ಅಂಕಿತ್ ಪಟೇಲ್ ಹೇಳಿದರು.

ಡಬ್ಲ್ಯುಸಿಸಿಬಿ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅದೇ ದಿನ ಜಿಲ್ಲೆಯ ಕಪ್ರದ ಅರಣ್ಯ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಇತರ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಲ್ಲಿ ಒಬ್ಬನ ಜಮೀನಿನಲ್ಲಿ ಚಿರತೆ ಮೃತದೇಹ ಪತ್ತೆಯಾಗಿದೆ ಎಂದು ಅಂಕಿತ್ ಹೇಳಿದರು.

ಸದ್ಯ ಆರೋಪಿಗಳ ವಿರುದ್ಧ ಇದೀಗ ವನ್ಯಜೀವಿ (ರಕ್ಷಣೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ,(ಏಜೆನ್ಸೀಸ್).