More

    ರಾಮಮಂದಿರ ಉದ್ಘಾಟನೆ: ಅಯೋಧ್ಯೆಯಲ್ಲಿ ಕಾಣಸಿಗಲಿವೆ ರಾಮಾಯಣ ಕಾಲದ ಮರಗಳು!

    ಅಯೋಧ್ಯೆ: ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಜನವರಿ 22 ರಂದು ಅದ್ದೂರಿಯಾಗಿ ನಡೆಯಲಿರುವ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೂ ಮೊದಲು ನಗರದಾದ್ಯಂತ ರಾಮಾಯಣ ಕಾಲದ ಸಸ್ಯಗಳು ಮತ್ತು ಅಳಿವಿನಂಚಿನಲ್ಲಿರುವ ಮರಗಳನ್ನು ನೆಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

    ಇದನ್ನೂ ಓದಿ: “ನಾವೇಕೆ ದ್ವೇಷ ಸಹಿಸಿಕೊಳ್ಳಬೇಕು”: ಮಾಲ್ಡೀವ್ಸ್ ಬದಲು ಲಕ್ಷದ್ವೀಪಕ್ಕೆ ಬೆಂಬಲ ವ್ಯಕ್ತಪಡಿಸಿದ ಸೆಲೆಬ್ರಿಟಿಗಳು

    ಈಗಾಗಲೇ ಸುಮಾರು 50,000 ಗಿಡಗಳು ಸಿದ್ಧವಾಗಿದ್ದು, ಶೀಘ್ರದಲ್ಲೇ ಅಯೋಧ್ಯೆಗೆ ಆಗಮಿಸಲಿವೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಯೋಧ್ಯೆಯಲ್ಲಿ ರಾಮ ಮಂದಿರದ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಪ್ರಸ್ತುತ 50 ಸಾವಿರ ಗಿಡಗಳ ಆರ್ಡರ್ ಇದ್ದು, ಇನ್ನಷ್ಟು ತಳಿಯ ಗಿಡಗಳು ಇಲ್ಲಿಗೆ ಬರಲಿದ್ದು, ವಿವಿಧ ವಾಹನಗಳ ಸಹಾಯದಿಂದ ಅಯೋಧ್ಯೆಗೆ ಬಂದಿಳಿಯಲಿದೆ ಎಂದು ನರ್ಸರಿ ನಿರ್ದೇಶಕ ರಾಮ್ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ.

    ಈ ಮಧ್ಯೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ವಿಶಾಲ್ ಸಿಂಗ್ ಮಾತನಾಡಿ, ರಾಮಾಯಣದಲ್ಲಿ ಉಲ್ಲೇಖಿಸಲಾದ ಸಸ್ಯಗಳನ್ನು ಪ್ರಾಧಿಕಾರವು ಪ್ರಚಾರ ಮಾಡುತ್ತಿದೆ. ರಾಮಾಯಣದಲ್ಲಿ ಹೇಳಿರುವ ಗಿಡಗಳಿಗೆ ಹಾಗೂ ಅಳಿವಿನಂಚಿನಲ್ಲಿರುವ ಸಸ್ಯಗಳಿಗೂ ಉತ್ತೇಜನ ನೀಡುತ್ತಿದ್ದೇವೆ. ಇದಲ್ಲದೆ ಹೂಗಳಿಗೆ ತೋಟಗಾರಿಕೆ ಸೌಂದರ್ಯೀಕರಣ ಕೂಡ ಮಾಡುತ್ತಿದ್ದೇವೆ ಎಂದು ಹೇಳಿದರು,(ಏಜೆನ್ಸೀಸ್).

    VIDEO| ‘ಬಿಜೆಪಿಯಲ್ಲಿ ಎಲ್ಲರೂ ಯತ್ನಾಳ್​ ಆಗೋಕೆ ಸಾಧ್ಯವಿಲ್ಲ’; ಹೀಗಂದಿದ್ಯಾಕೆ ಕೆ.ಎಸ್​. ಈಶ್ವರಪ್ಪ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts