ಹೊಸಪೇಟೆ(ಬಳ್ಳಾರಿ): ಚಿರತೆ ಕುರಿತು ಅರಣ್ಯ ಸಚಿವರೊಂದು ಹೇಳಿಕೆ ಕೊಟ್ಟಿದ್ದಾರೆ. ಅದರ ಬೆನ್ನಲೇ ರಾಜ್ಯದಲ್ಲಿ ನರಭಕ್ಷಕ ಚಿರತೆಗಳ ಮೇಲೆ ಬಂದೂಕಿನಿಂದ ಗುಂಡು ಹಾರಿಸುವ ಕಾರ್ಯ ಶೀಘ್ರವೇ ನಡೆಯುತ್ತಾ? ಅದೂ ಸರ್ಕಾರದ ಒಪ್ಪಿಗೆ ಮೇರೆಗೆ... ಎಂಬ ಚರ್ಚೆ ಶುರುವಾಗಿದೆ.
ರಾಜ್ಯದ ನಾನಾ ಕಡೆ ಮನುಷ್ಯರ ಮೇಲೆ ಚಿರತೆಗಳು ದಾಳಿ ನಡೆಸುತ್ತಿದ್ದು, ಸಾವು-ನೋವಿನ ಪ್ರಕರಣ ಹೆಚ್ಚುತ್ತಲೇ ಇದೆ. ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಅರಣ್ಯ ಸಚಿವ ಆನಂದ್ ಸಿಂಗ್, ನರಭಕ್ಷಕ ಚಿರತೆಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಮನುಷ್ಯರನ್ನು ತಿಂದು ಹಾಕುವ ಚಿರತೆಗಳನ್ನು ಶೂಟ್ ಮಾಡಲು ಚಿಂತನೆ ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿರಿ ಬೆಳ್ಳಂಬೆಳಗ್ಗೆ ಭೀಕರ ಅಫಘಾತ, ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ಚಿರತಗಳ ಮೇಲೆ ಗುಂಡು ಹಾರಿಸಲು ಪರಿಸರ ಪ್ರೇಮಿಗಳ ಆಕ್ಷೇಪಣೆಯೂ ಇದೆ. ಸದ್ಯ ನರಹಂತಕ ಚಿರತೆಗಳನ್ನು ಗುರುತಿಸುವ ಕಾರ್ಯ ಅಧಿಕಾರಿಗಳಿಂದ ನಡೆಯುತ್ತಿದೆ. ಅಂತಿಮವಾಗಿ ಚರ್ಚಿಸಿ, ಶೂಟೌಟ್ ನಿರ್ಧಾರಕ್ಕೆ ಬರಲಾಗುತ್ತದೆ. ರಾಜ್ಯದಲ್ಲಿ ಚಿರತೆಗಳ ಸಂಖ್ಯೆಯೂ ಹೆಚ್ಚಾಗಿವೆ ಎಂದರು.
ಚಿರತೆ ದಾಳಿಗೆ ಸಂಬಂಧಿಸಿದ ಒಂದಿಲ್ಲೊಂದು ಘಟನೆ ರಾಜ್ಯದಲ್ಲಿ ಸಂಭವಿಸುತ್ತಲೇ ಇದೆ. ಮ್ಕಕಳಾದಿಯಾಗಿ ವೃದ್ಧರನ್ನೂ ಚಿರತೆ ತಿನ್ನುತ್ತಿದೆ. ಚಿರತೆ ಇರುವ ಪ್ರದೇಶದಲ್ಲಿ ಜನತೆ ಭಯದಿಂದಲೇ ಬದುಕು ಸಾಗಿಸುತ್ತಿದ್ದಾರೆ.