ನ್ಯೂಸ್

'ಲಿಯೋ': 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರೀ-ರಿಲೀಸ್​ ಆಗಲಿದೆ ದಳಪತಿ ವಿಜಯ್​ ಚಿತ್ರ?

ಮೋಹನ್​ ಶೆಟ್ಟಿ

ತಮಿಳುನಾಡು: ಕಾಲಿವುಡ್​ನ ಸ್ಟಾರ್​ ನಟ ದಳಪತಿ ವಿಜಯ್​ ಮತ್ತು ತ್ರಿಶಾ ಕೃಷ್ಣನ್​ ಮುಖ್ಯಭೂಮಿಕೆಯಲ್ಲಿ ಅಭಿನಯದ ಪ್ಯಾನ್​ ಇಂಡಿಯಾ ಸಿನಿಮಾ 'ಲಿಯೋ' ಅಕ್ಟೋಬರ್​ 19 ರಂದು ಬಿಡುಗಡೆಗೊಂಡು ಬ್ಲಾಕ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮಿತು. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರವು ಜಾಗತಿಕ 600 ಕೋಟಿ ರೂ. ಕಲೆಕ್ಷನ್​ ಮಾಡುವ ಮುಖೇನ ಸೂಪರ್​​ಸ್ಟಾರ್​ ರಜನಿಕಾಂತ್ ನಟನೆಯ 'ಜೈಲರ್' ಚಿತ್ರವನ್ನು ಹಿಂದಿಕ್ಕಿ 2023ರ ಅತಿ ಹೆಚ್ಚು ಗಳಿಕೆಯ ತಮಿಳು ಚಲನಚಿತ್ರವಾಗಿ ಗುರುತಿಸಿಕೊಂಡಿತು.

ಇದೀಗ ಕಾಲಿವುಡ್ ಅಂಗಳದಲ್ಲಿ​ ಹೊಸ ಸುದ್ದಿಯೊಂದು ವ್ಯಾಪಕವಾಗಿ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿಯ ಪ್ರಕಾರ ಚಿತ್ರತಂಡ 'ಲಿಯೋ' ಸಿನಿಮಾವನ್ನು ತಮಿಳುನಾಡಿನಾದ್ಯಂತ 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಮರು ಬಿಡುಗಡೆಗೊಳಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ.

ಇದರ ಹಿಂದಿನ ಕಾರಣವೆಂದರೆ ಟಿಕೆಟ್ ಕೌಂಟರ್‌ಗಳಲ್ಲಿ ಯೋಗ್ಯವಾದ ಆದಾಯವನ್ನು ಗಳಿಸುವ ಸಲುವಾಗಿ ಮತ್ತೊಮ್ಮೆ ಹೆಚ್ಚಿನ ಪರದೆಯ ಮೇಲೆ ಬಿಡುಗಡೆಗೊಳಿಸಲು ಸದ್ಯ ಚಿತ್ರ ತಯಾರಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ವಿಜಯ್​, ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಅರ್ಜುನ್​, ಸೂರ್ಯ ಮುಂತಾದವರ ತಾರಾಗಣವಿದೆ. ಎಸ್.ಎಸ್. ಲಲಿತ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಖ್ಯಾತ ಮ್ಯೂಸಿಕ್ ಕಂಪೋಸರ್​ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ,(ಏಜೆನ್ಸೀಸ್).