ಚಿಕ್ಕೋಡಿ: ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಣ ಸವದಿ ಅವರಿಂದು ಅಥಣಿಯ ಮಿನಿ ವಿಧಾನಸೌಧದಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ಗಾಂಧಿ ಟೋಪಿ ಧರಿಸಿಕೊಂಡು ಐದು ಜನರ ಜೊತೆ ಕಚೇರಿಯ ಒಳಗೆ ಸವದಿ ನಾಮಪತ್ರ ಸಲ್ಲಿಸಿದರು. ಸವದಿ ಐದು ಚುನಾವಣೆಯನ್ನು ಎದುರಿಸಿದ್ದು, ಆರನೇ ಚುನಾವಣೆಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸವದಿ ಮೂರು ಚುನಾವಣೆಯಲ್ಲಿ ಗೆದ್ದಿದ್ದಾರೆ.
ಇದನ್ನೂ ಓದಿ: ಇಬ್ಬರು ಮಾಡೆಲ್ಗಳಿಗೆ 60 ಸಾವಿರ ರೂಪಾಯಿ! ಹೋಟೆಲ್ ರೂಮ್ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ನಟಿ ಆರತಿ
ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು.
ಮೇ. 10ಕ್ಕೆ ರಾಜ್ಯದಲ್ಲಿ ಮತಾದನ ನಡೆಯಲಿದ್ದು, ಮೇ. 13ಕ್ಕೆ ಫಲಿತಾಂಶ ಹೊರ ಬೀಳಲಿದೆ. ಒಟ್ಟು 224 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯದಲ್ಲಿ ಸರ್ಕಾರ ರಚಿಸಲು 113 ಸ್ಥಾನಗಳ ಬಹುಮತ ಬೇಕಿದೆ. (ದಿಗ್ವಿಜಯ ನ್ಯೂಸ್)