ರಾಯಚೂರು: ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರದಲ್ಲಿ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಕರ್ನಾಟಕ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಗಡಿ ವಿಚಾರಕ್ಕೆ ಬರದೆ ಬಾಯಿ ಮುಚ್ಚಿಕೊಂಡಿದ್ರೆ ಅವರಿಗೆ ಒಳ್ಳೆಯದು ಎಂದು ಅವರು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಪದೇಪದೆ ಬೆಳಗಾವಿಯ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಖಂಡಿಸಿದರೂ ಮತ್ತೇ ಅದೇ ವಿಷಯವನ್ನು ಕೆದಕುತ್ತಿದ್ದಾರೆ. ಈಗಾಗಲೇ ತೀರ್ಪು ಆಗಿರುವುದರಿಂದ ಮಹಾಜನ ಆಯೋಗವನ್ನು ನಾವು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇವೆ. ಈಗ ಮಹಾರಾಷ್ಟ್ರದ ಏಕೀಕರಣದವರು ಸುಪ್ರೀಂ ಕೋರ್ಟ್ನಲ್ಲಿ ಧಾವೆ ಹಾಕಿದ್ದಾರೆ. ಅದೂ ಕೂಡಾ ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸ ಹಾಗೂ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಕಾಂಗ್ರೆಸ್ಗೆ ಅಂಬೇಡ್ಕರ್ ಶಾಪ ತಟ್ಟಿದೆ; ಕಂಬ ನಿಲ್ಲಿಸಿದರೂ ಗೆಲ್ಲುತ್ತಿದ್ದ ಪಕ್ಷಕ್ಕೆ ಕ್ಷೇತ್ರವೇ ಇಲ್ಲದಂತಾಗಿದೆ’
ಅನಾವಶ್ಯಕವಾಗಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಪ್ರಭುದ್ದ ರಾಜಕಾರಿಣಿಯಂತೆ ಅವರು ಮಾತನಾಡಬೇಕು. ಅವರ ಸರ್ಕಾರ ಗೊಂದಲದಲ್ಲಿದೆ. ಮನೆಯೊಂದು ಮೂರು ಬಾಗಿಲು ಅನ್ನೋ ರೀತಿ ಆಗಿದೆ. ಹೀಗಾಗಿ ಜನರಲ್ಲಿ ಗೊಂದಲ ಸೃಷ್ಟಿಸ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್ ಗ್ರಾಮದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)