ನ್ಯೂಸ್

ಭಾಷೆ ಅಭಿಯಾನ 66 ಸಾವಿರ ಟ್ವೀಟ್

ಮಂಗಳೂರು: ನನ್ನ ಭಾಷೆ ನನ್ನ ಊರಿನಲ್ಲಿ ಅಧಿಕೃತ ಭಾಷೆಯಾಗಬೇಕು ಎಂದು ಆಗ್ರಹಿಸಿ ಸ್ವಾತಂತ್ರ್ಯೊತ್ಸವ ಅಮೃತ ಮಹೋತ್ಸವ ದಿನ ಆಯೋಜಿಸಿದ ಟ್ವೀಟ್ ಅಭಿಯಾನದಲ್ಲಿ ದೇಶದ ವಿವಿಧೆಡೆಗಳ ಸುಮಾರು 66,356 ಜನರು ಭಾಗವಹಿಸಿದ್ದಾರೆ.

ದಕ್ಷಿಣ ಭಾರತದ ತುಳು, ಕೊಡವ, ಉತ್ತರ ಭಾರತದ ಭೋಜ್​ಪುರಿ, ರಾಜಸ್ಥಾನಿ, ಘರ್​ವಾಲಿ, ಕುಮುನಿ, ಛತ್ತೀಸ್​ಗಢ ಸಹಿತ 10 ಭಾಷೆಗಳನ್ನು ಮಾತನಾಡುವ ಜನರು ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಂಡರು. ಅಭಿಯಾನದ ಸಂಘಟಕರಲ್ಲಿ ಓರ್ವರಾದ ಭಾಷಾ ಹೋರಾಟಗಾರ ವಿಶಾಲ್ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.

ಸೋಮವಾರ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆ ತನಕ ಟ್ವೀಟ್ ಅಭಿಯಾನ ನಡೆಸಲು ಕರೆ ನೀಡಲಾಗಿತ್ತು. ‘ನೋ ಯುವರ್ ರೂಟ್ಸ್’ ಎನ್ನುವ ಸಂಸ್ಕೃತಿಯ ಹಬ್ ಈ ಟ್ವೀಟ್ ಅಭಿಯಾನದ ಹಿಂದಿದೆ. ಮಾನ್ಯತೆ ದೊರೆಯವ ಸ್ಥಳೀಯ ಭಾಷೆಗಳು ಗಟ್ಟಿಯಾಗಲಿವೆ. ಅಳಿವಿನಂಚಿನಲ್ಲಿರುವ ಭಾಷೆಗಳು ಮತ್ತೆ ಸಜೀವವಗೊಳಿಸುವುದು ಕೂಡ ಟ್ವೀಟ್ ಅಭಿಯಾನದ ಮುಖ್ಯ ಉದ್ದೇಶ.