ಬೆಂಗಳೂರು: ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109(1)(ಐ)ಗೆ ತಿದ್ದುಪಡಿ ತಂದಿರುವ ಸರ್ಕಾರ, ಭೂಮಿ ನೀಡಿಕೆ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ಕೈಗಾರಿಕೋದ್ಯಮಿಗಳು ರೈತರಿಂದ ನೇರವಾಗಿ ಭೂಮಿ ಹಕ್ಕು ಪಡೆದುಕೊಳ್ಳಲು ಬರುವುದಿಲ್ಲ.
ಕರ್ನಾಟಕ ಉದ್ಯೋಗ ಮಿತ್ರ ವೆಬ್ ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯ. ಎಸ್ಎಲ್ಎಸ್ ಡಬ್ಲ್ಯುಸಿಸಿ/ಎಸ್ಎಚ್ಎಲ್ಸಿಸಿ ಅನುಮೋದನೆಗೊಂಡ ಪ್ರಸ್ತಾವನೆಗಳಿಗೆ ಪರಿಭಾವಿತ ಭೂ ಪರಿವರ್ತನೆಗೆ ಅನುಸರಿಸಬೇಕಾದ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಕೃಷಿ ಜಮೀನನ್ನು ಕೃಷಿಯೇತರ, ಕೈಗಾರಿಕೆ ಉದ್ದೇಶಕ್ಕಾಗಿ ಖರೀದಿಸಲು ಏನೇನು ಕ್ರಮ ಅನುಸರಿಸಬೇಕು ಎನ್ನುವ ಬಗ್ಗೆ ತಿಳಿಸಲಾಗಿದೆ.
ರಾಜ್ಯಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ/ರಾಜ್ಯ ಉನ್ನತಮಟ್ಟದ ಒಪ್ಪಿಗೆ ಸಮಿತಿಗಳು ಅನುಮೋದಿಸಿದ ನಂತರವಷ್ಟೇ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಕಲಂ 63, 79ಎ, 79ಬಿ ಹಾಗೂ 80ರಿಂದ ವಿನಾಯಿತಿ ಸಿಗಲಿದ್ದು, ಪ್ರಮುಖ ಮಾರ್ಗಸೂಚಿಗಳು ಇಂತಿವೆ.
ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸಿ ತುರ್ತು ಜಾರಿಗೊಳಿಸುವ ಕುರಿತು ಸರ್ಕಾರದಲ್ಲಿ ರ್ಚಚಿಸಲಾಗಿದೆ. ಇನ್ನು ಹತ್ತು ದಿನಗಳಲ್ಲಿ ಕಾಯ್ದೆಯ ತಿದ್ದುಪಡಿ ಆದೇಶ ಹೊರಬರಲಿದೆ. | ಆರ್. ಅಶೋಕ್ ಸಚಿವ
ಮೇಲ್ಕಂಡ ಮಾರ್ಗಸೂಚಿಗಳನ್ವಯ ಭೂಮಿ ತಂತ್ರಾಂಶ, ಕಾವೇರಿ ತಂತ್ರಾಂಶ ಹಾಗೂ ಕರ್ನಾಟಕ ಉದ್ಯೋಗ ಮಿತ್ರ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು ಮಾಡಬೇಕು. ಭೂಮಿ ಹಕ್ಕು ಬದಲಾವಣೆ ಪ್ರಕ್ರಿಯೆ ಸಂದರ್ಭ ಈ 10 ನಿಯಮಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.