More

    ಚೀನಾ-ಭಾರತ ಸಂಘರ್ಷ: ಭಾರತದ 20 ಯೋಧರು ಹುತಾತ್ಮ, 40ಕ್ಕೂ ಹೆಚ್ಚು ಚೀನಾ ಯೋಧರೂ ಹತರಾಗಿರುವ ಶಂಕೆ

    ನವದೆಹಲಿ: ಭಾರತದ ಅಕ್ಸಾಯ್ ಚೀನಾ ಗಡಿ ಭಾಗದ ಲೈನ್​ ಆಫ್​ ಆ್ಯಕ್ಚುವಲ್​ ಕಂಟ್ರೋಲ್​ ಭಾಗದಲ್ಲಿ ಚೀನಾ ಸೇನೆ ಅತಿಕ್ರಮಣ ಮಾಡಿದ್ದು ಗಾಲ್ವಾನ್ ವ್ಯಾಲಿ ತನ್ನದೆಂದು ವಾದಿಸತೊಡಗಿದೆ. ಇದರ ಬೆನ್ನಿಗೆ ಎರಡೂ ಸೇನೆಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು, ಸೋಮವಾರ ರಾತ್ರಿ 20 ಭಾರತೀಯ ಯೋಧರು ಹುತಾತ್ಮರಾದರೆ, 43 ಚೀನಾ ಯೋಧರು ಹತರಾಗಿರುವ ಶಂಕೆ ಇದೆ.

    ಇದಕ್ಕೂ ಮೊದಲು ಭಾರತದ ಮೂವರು ಹಾಗೂ ಚೀನಾದ ನಾಲ್ವರು ಯೋಧರು ಸಂಘರ್ಷಕ್ಕೆ ಬಲಿಯಾಗಿರುವ ಸುದ್ದಿ ಪ್ರಸಾರವಾಗಿತ್ತು. ಉನ್ನತ ಮೂಲಗಳ ಪ್ರಕಾರ ಈ ಸಂಖ್ಯೆ ಹೆಚ್ಚಾಗಿದೆ. ಈ ವಿದ್ಯಮಾನಕ್ಕೂ ಮೊದಲು ಭಾರತ ಮತ್ತು ಚೀನಾ ಪಡೆಗಳ ನಡುವೆ ಐದು ವಾರಗಳಿಂದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಚೀನಾ ಸೇನೆ ಲಡಾಖ್ ಭಾಗದಲ್ಲಿ ಆಯಕಟ್ಟಿನ ಪ್ರದೇಶದಲ್ಲಿ ಸೇನೆ ನಿಯೋಜಿಸಿ, ಅತಿಕ್ರಮಣ ಆರಂಭಿಸಿದ್ದೇ ಇದಕ್ಕೆ ಕಾರಣ.

    ಪ್ರಧಾನಿ ನರೇಂದ್ರ ಮೋದಿ ಈ ವಿದ್ಯಮಾನಕ್ಕೆ ಸಂಬಂಧಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಜನಾಥ್ ಸಿಂಗ್ ಸೇನೆ ಜತೆಗೆ ಇದ್ದು, ಅಲ್ಲಿನ ವಿದ್ಯಮಾನಗಳನ್ನು ಅವಲೋಕಿಸುತ್ತಿದ್ದಾರೆ. ಈ ನಡುವೆ, ಚೀನಾದ ಸರ್ಕಾರಿ ಮುಖವಾಣಿ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಸಂಪಾದಕ ಭಾರತಕ್ಕೆ ಎಚ್ಚರಿಕೆ ನೀಡುವಂತಹ ಟ್ವೀಟ್ ಮಾಡಿದ್ದು ಜಗತ್ತಿನ ಗಮನ ಸೆಳೆದಿತ್ತು. (ಏಜೆನ್ಸೀಸ್​)

    ನದಿಗೆ ಬಿದ್ದು ಹುತಾತ್ಮರಾದ ಭಾರತದ ಕರ್ನಲ್​, ಇಬ್ಬರು ಯೋಧರು; ಐವರು ಚೀನಿಯರ ಸಾವು

    ಕತ್ತಲಲ್ಲಿ ಕಲ್ಲು ತೂರಾಟ ಮಾಡಿದ ವಂಚಕ ಚೀನಿ ಯೋಧರು

    ಏಕಪಕ್ಷೀಯ ನಿರ್ಧಾರ ಕೈಗೊಂಡು ಅಪಾಯ ಮೈಮೇಲೆ ಎಳೆದುಕೊಳ್ಳಬೇಡಿ: ಚೀನಿಯರ ಎಚ್ಚರಿಕೆ

    ಚೀನಿ ದಾಳಿಯಲ್ಲಿ ಭಾರತದ ಸೇನಾಧಿಕಾರಿ ಮತ್ತು ಇಬ್ಬರು ಯೋಧರು ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts