ನ್ಯೂಸ್

ಹಸೆಮಣೆ ಏರಲು ಸಜ್ಜಾದ ಲಕ್ಷ್ಮೀ ಬಾರಮ್ಮ ಖ್ಯಾತಿಯ Vidhi; ಭಾವಿ ಪತಿ ಜತೆಗಿನ Romantic Photos​ ವೈರಲ್​

ಬೆಂಗಳೂರು: ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಲಕ್ಷ್ಮೀ ಬಾರಮ್ಮ (Lakshmi Baramma) ಮಹಿಳೆಯರಿಗೆ ಅಚ್ಚುಮೆಚ್ಚಾಗಿದ್ದು, ಈ ಧಾರವಾಹಿಯಲ್ಲಿ ನಾಯಕನ ತಂಗಿ ಪಾತ್ರದಲ್ಲಿ ನಟಿಸುತ್ತಿರುವ ವಿಧಿ (Vidhi) ನಿಜಜೀವನದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದು, ಭಾವಿ ಪತಿಯೊಂದಿಗೆ ರೊಮ್ಯಾಂಟಿಕ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಧಿ (Vidhi) ಪಾತ್ರವನ್ನು ನಿರ್ವಹಿಸುತ್ತಿರುವವರ ಹೆಸರು ಲಾವಣ್ಯ ಹಿರೇಮಠ್ (Lavanya Hiremath)​. ಇವರು ವೃತ್ತಿಯಲ್ಲಿ ದಂತ ವೈದ್ಯರಾಗಿದ್ದು (Dentist), ನಟನೆಯ ಜೊತೆಜೊತೆಗೆ ತಮ್ಮ ವೃತ್ತಿಯಲ್ಲೂ ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಲಾವಣ್ಯ (Lavanya Hiremath) ಅವರು ತಮ್ಮ ಭಾವಿ ಪತಿಯೊಂದಿಗಿನ ರೊಮ್ಯಾಂಟಿಕ್​ ಫೋಟೋಗಳನ್ನು (Romantic Photos) ಪೋಸ್ಟ್​ ಮಾಡುವ ಮೂಲಕ ತಾವು ಮದುವೆಯಾಗುತ್ತಿರುವುದಾಗಿ ಘೋಷಿಸಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಇನ್ನೂ ಲಾವಣ್ಯ (lavanya Hiremath) ಅವರು ವಿವಾಹವಾಗುತ್ತಿರುವ ಹುಡುಗನ ಹೆಸರು ಅಕ್ಷಯ್ ಆಚಾರ್ಯ. ಅವರು ಕೂಡ ಡೆಂಟಿಸ್ಟ್ ಆಗಿದ್ದು, ಈ ಜೋಡಿ ನವೆಂಬರ್​ 11ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಅಕ್ಷಯ್​ ಹಾಗೂ ಲಾವಣ್ಯ ಅವರು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದು, ಇವರಿಬ್ಬರ ಪ್ರೀತಿಗೆ ಉಭಯ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು ಮದುವೆಯ ಮುದ್ರೆ ಬಿದ್ದಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಕಾವೇರಿ ಕಷ್ಯಪ್ ಹಾಗೂ ಕೃಷ್ಣ ಕಷ್ಯಪ್ ಪುತ್ರಿ ಹಾಗೂ ವೈಷ್ಣವ್ ತಂಗಿ ವಿಧಿ ಪಾತ್ರದಲ್ಲಿ ಸೊಕ್ಕಿನ ಹುಡುಗಿಯಾಗಿ,  ತಾನು ಮಾಡಿದ್ದೆ ಸರಿ ಎನ್ನುವಂತೆ ನಡೆದುಕೊಂಡು, ಅಣ್ಣನನ್ನು ಪ್ರೀತಿ ಮಾಡುವಷ್ಟು ನನ್ನನ್ನು ಈ ಮನೆಯಲ್ಲಿ ಯಾರೂ ಪ್ರೀತಿ ಮಾಡಲ್ಲ ಕೇರ್ ಮಾಡಲ್ಲ ಎಂದು ದೂರುವ ಹುಡುಗಿ ವಿಧಿ ಪಾತ್ರಧಾರಿ ವೀಕ್ಷಕರಿಗೆ ಹತ್ತಿರವಾಗಿದೆ. ಅದು ಎಷ್ಟರ ಮಟ್ಟಿಗೆಂದರೆ ಜನರು ವಿಧಿಯ ಮುಖ ನೋಡಿದ ಕೂಡಲೇ ಬೈದುಕೊಳ್ಳುವ ಮಟ್ಟಿಗೆ ಈ ಪಾತ್ರ ಪಾಪ್ಯುಲರ್​ ಆಗಿದೆ.